ಉಪೇಂದ್ರ ಕುಶ್ವಾಹ
ಪಟ್ನಾ: ‘ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂಯುಕ್ತ ಜನತಾದಳದಲ್ಲಿ (ಜೆಡಿಯು) ತಾವು ಹೊಂದಿರುವ ಪ್ರಾಬಲ್ಯವನ್ನು ಬಿಟ್ಟುಕೊಡಬೇಕು’ ಎಂದು ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಸಲಹೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಪೋಸ್ಟ್ ರಾಜಕೀಯ ವಲಯದಲ್ಲಿ ಕಂಪನ ಸೃಷ್ಟಿಸಿದ ಬೆನ್ನಿಗೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಇದು ನನ್ನ ಅಭಿಪ್ರಾಯವಲ್ಲ. ಇಂದಿಗೂ ನನ್ನೊಂದಿಗೆ ಸಂಪರ್ಕದಲ್ಲಿರುವ ಜೆಡಿಯುನ ಸಹಸ್ರಾರು ಕಾರ್ಯಕರ್ತರ ಭಾವನೆಗೆ ಧ್ವನಿಯಾಗಿದ್ದೇನೆ ಅಷ್ಟೇ’ ಎಂದು ಸ್ಪಷ್ಟಪಡಿಸಿದರು.
‘ನಿತೀಶ್ ಕುಮಾರ್ ಅವರು ದೇಶದ ಅಗ್ರ ಐವರು ರಾಜಕಾರಣಿಗಳಲ್ಲಿ ಅಪ್ರತಿಮ ನಾಯಕ’ ಎಂದ ರಾಷ್ಟ್ರೀಯ ಲೋಕ ಮೋರ್ಚಾದ ಅಧ್ಯಕ್ಷರೂ ಆದ ಕುಶ್ವಾಹ, ‘ಪಕ್ಷದಲ್ಲಿನ ಪ್ರಾಬಲ್ಯ ಬಿಟ್ಟುಕೊಟ್ಟು, ರಾಜ್ಯದ ಆಡಳಿತದತ್ತ ಗಮನಹರಿಸುವುದು ಒಳ್ಳೆಯದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.