ADVERTISEMENT

ಲಖಿಂಪುರ ಖೇರಿ ಪ್ರಕರಣದ ಆರೋಪಿ ಆಶಿಶ್‌ ಮಿಶ್ರಾಗೆ ಡೆಂಗಿ

ಪಿಟಿಐ
Published 24 ಅಕ್ಟೋಬರ್ 2021, 6:57 IST
Last Updated 24 ಅಕ್ಟೋಬರ್ 2021, 6:57 IST
ಆಶಿಶ್‌ ಮಿಶ್ರಾ
ಆಶಿಶ್‌ ಮಿಶ್ರಾ   

ಲಖಿಂಪುರ್‌ ಖೇರಿ (ಉತ್ತರ ಪ್ರದೇಶ): ಲಖಿಂಪುರಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಆಶಿಶ್‌ ಮಿಶ್ರಾ ಅವರಿಗೆ ಡೆಂಗಿ ಜ್ವರ ಬಾಧಿಸಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಕುಮಾರ್ ಮಿಶ್ರಾ ಅವರ ಪುತ್ರರಾಗಿರುವ ಆಶಿಶ್ ಮಿಶ್ರಾ ಅವರನ್ನು ಶನಿವಾರ ಸಂಜೆ ಜಿಲ್ಲಾ ಕಾರಾಗೃಹದ ಆರೋಗ್ಯ ತಪಾಸಣಾ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಲಾಯಿತು ಎಂದು ಹೆಚ್ಚುವರಿ ಎಸ್‌ಪಿ ಅರುಣ್‌ ಕುಮಾರ್ ಸಿಂಗ್ ತಿಳಿಸಿದರು.‌

ಆಶಿಶ್‌ ಮಿಶ್ರಾ ಮತ್ತು ಇತರ ಮೂವರನ್ನು ಶುಕ್ರವಾರ ಸಂಜೆ ಇನ್ನಷ್ಟು ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು.

ಅಕ್ಟೋಬರ್‌ 3ರಂದು ಸಂಭವಿಸಿದ ಹಿಂಸಾಚಾರದಲ್ಲಿ ನಾಲ್ವರು ರೈತರ ಸಹಿತ ಎಂಟು ಮಂದಿ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಿಶ್ ಮಿಶ್ರಾ ಸಹಿತ 13 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.