ADVERTISEMENT

ದೇಶಕ್ಕಾಗಿ ಇಂದಿರಾ 32 ಗುಂಡೇಟು ತಿಂದರು: ರಾಹುಲ್‌ ಗಾಂಧಿ

ಪಿಟಿಐ
Published 16 ಡಿಸೆಂಬರ್ 2021, 11:16 IST
Last Updated 16 ಡಿಸೆಂಬರ್ 2021, 11:16 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ    

ಡೆಹ್ರಾಡೂನ್‌: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಉತ್ತರಾಖಂಡದಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರವನ್ನು ಭಾವನಾತ್ಮಕವಾಗಿ ಪ್ರಾರಂಭಿಸಿದರು. ಉತ್ತರಾಖಂಡದ ಅನೇಕ ಕುಟುಂಬಗಳಂತೆ ತಮ್ಮ ಕುಟುಂಬವೂ ದೇಶಕ್ಕಾಗಿ ತ್ಯಾಗ ಮಾಡಿದೆ ಎಂದು ಅವರು ಹೇಳಿದರು.

‘ತ್ಯಾಗವೇ ಉತ್ತರಾಖಂಡದೊಂದಿಗಿನ ನನ್ನ ಸಂಬಂಧವೂ ಆಗಿದೆ,’ ಎಂದು ಅವರು ಅವರು ಹೇಳಿದರು.

1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ 50ನೇ ವರ್ಷಾಚರಣೆಯ ಅಂಗವಾಗಿ ಡೆಹ್ರಾಡೂನ್‌ನ ಪರೇಡ್ ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ಅವರು ಮಾತನಾಡಿದರು.

ADVERTISEMENT

‘ದೇಶದ ಗೌರವಕ್ಕಾಗಿ ಹೋರಾಡುವ ಕಾರಣಕ್ಕಾಗಿ ಉತ್ತರಾಖಂಡದ ಸಾವಿರಾರು ಕುಟುಂಬಗಳು ತಮ್ಮ ಸಂಬಂಧಿಕರನ್ನು ಕಳೆದುಕೊಳ್ಳುತ್ತಿವೆ. ಅದೇ ರೀತಿ ನನ್ನ ಕುಟುಂಬವೂ ದೇಶಕ್ಕೆ ತ್ಯಾಗ ಮಾಡಿದೆ. ಇದು ಉತ್ತರಾಖಂಡದೊಂದಿಗಿನ ನನ್ನ ಸಂಬಂಧ’ ಎಂದು ಅವರು ಹೇಳಿದರು.

ತಮ್ಮ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಉಲ್ಲೇಖಿಸಿ ಮಾತನಾಡಿದ ರಾಹುಲ್‌ ‘ಇಂದಿರಾ ಗಾಂಧಿ ಅವರು ದೇಶಕ್ಕಾಗಿ 32 ಗುಂಡೇಟು ತಿಂದರು. ಆದರೆ 1971ರ ಯುದ್ಧ ವಾರ್ಷಿಕೋತ್ಸವದಂದು ನವದೆಹಲಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಅವರ ಹೆಸರನ್ನೇ ಉಲ್ಲೇಖಿಸಿಲ್ಲ,’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ದೇಶಕ್ಕಾಗಿ ಯಾವುದೇ ತ್ಯಾಗ ಮಾಡದ ಕುಟುಂಬಗಳಿಗೆ ಇದ್ಯಾವುದೂ ಅರ್ಥವಾಗುವುದಿಲ್ಲ ಎಂದೂ ಅವರು ಹೇಳಿದರು.

1971ರ ಯುದ್ಧದಲ್ಲಿ ಪಾಕಿಸ್ತಾನವು 13 ದಿನಗಳಲ್ಲೇ ಭಾರತಕ್ಕೆ ಶರಣಾಗಿತ್ತು. ಸಾಮಾನ್ಯವಾಗಿ, ಯುದ್ಧವು 6 ತಿಂಗಳು ಆಥವಾ 1-2 ವರ್ಷಗಳವರೆಗೆ ನಡೆಯುತ್ತದೆ. ಅಫ್ಗಾನಿಸ್ತಾನವನ್ನು ಸೋಲಿಸಲು ಅಮೆರಿಕ 20 ವರ್ಷಗಳನ್ನು ತೆಗೆದುಕೊಂಡಿತು ಆದರೆ ಭಾರತವು 13 ದಿನಗಳಲ್ಲಿ ಪಾಕಿಸ್ತಾನವನ್ನು ಸೋಲುವಂತೆ ಮಾಡಿತು. ಭಾರತವು ಒಗ್ಗಟ್ಟಿನಿಂದ ಇದನ್ನು ಸಾಧಿಸಿತು ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.