ADVERTISEMENT

ಲಾಕ್‌ಡೌನ್‌ನಿಂದ ಬೀದಿನಾಯಿಗಳ ವರ್ತನೆಯಲ್ಲಿ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 9:57 IST
Last Updated 8 ಏಪ್ರಿಲ್ 2020, 9:57 IST
ವ್ಯಕ್ತಿಯೊಬ್ಬ ಲಾಕ್ ಡೌನ್ ಸಂದರ್ಭದಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುತ್ತಿರುವುದು.
ವ್ಯಕ್ತಿಯೊಬ್ಬ ಲಾಕ್ ಡೌನ್ ಸಂದರ್ಭದಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುತ್ತಿರುವುದು.   

ನವದೆಹಲಿ(ಪಿಟಿಐ): ದೇಶದಲ್ಲಿಲಾಕ್‌ಡೌನ್‌‌ಬೀದಿ ನಾಯಿಗಳ ವರ್ತನೆಯಲ್ಲಿಸೂಕ್ಷ್ಮಬದಲಾವಣೆಗಳಿಗೆ ಕಾರಣವಾಗಿದ್ದು ಅವುಗಳು ಒಂದು ರೀತಿಯಗೊಂದಲದ ಸ್ಥಿತಿಯಲ್ಲಿವೆ ಎಂದು ದೆಹಲಿಯ ಪ್ರಾಣಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಶ್ವಾನ ತರಬೇತಿದಾರ ಯಾದವ್, ಎಲ್ಲಾ ನಾಯಿಗಳಲ್ಲೂ ಈ ರೀತಿಯ ಬದಲಾವಣೆ ಕಾಣುತ್ತಿಲ್ಲ. ಒಂದು ಜಾತಿಯ ನಾಯಿಗಳಲ್ಲಿ ಮಾತ್ರ ಈ ಬದಲಾವಣೆ ಕಂಡಿದೆ. ಕಾರಣ ಏನೆಂದರೆ, ಜನರು ರಸ್ತೆಯಲ್ಲಿ ತಿರುಗಾಡುತ್ತಿಲ್ಲ. ಆಹಾರ ಆಭಾವದಿಂದಾಗಿ ಒಂದುನಾಯಿಗಿಂತ ಮತ್ತೊಂದು ನಾಯಿ ಆಹಾರ ಕೊಟ್ಟರೆ ಕಿತ್ತಾಡುತ್ತವೆ ಎಂದು ಯಾದವ್ ಅಭಿಪ್ರಾಯಪಟ್ಟಿದ್ದಾರೆ.

ನಾಯಿಗಳಿಗೆ ಇದು ತುಂಬಾ ಕಷ್ಟಕರವಾದ ಸಮಯ, ಮಾರುಕಟ್ಟೆ ಹಾಗೂ ಇತರೆ ಜನಸಂದಣಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ನಾಯಿಗಳಿಗೆ ಈಗ ಯಾವುದೇ ಆಹಾರ ಇಲ್ಲದಂತಾಗಿದೆ ಎಂದು ಪ್ರಾಣಿ ತಜ್ಞರು ಹೇಳುತ್ತಾರೆ.ಭಾರತದಲ್ಲಿ ಈಗ 21 ದಿನಗಳ ಲಾಕ್ ಡೌನ್ ಜಾರಿಯಲ್ಲಿದೆ. ವಿಶ್ವದಾದ್ಯಂತ 183 ದೇಶಗಳಲ್ಲಿ ಕೊರೊನಾ ಸೋಂಕು ಜನರನ್ನು ಕಾಡುತ್ತಿದೆ.

ADVERTISEMENT

ಬೀದಿನಾಯಿಗಳು ಆಹಾರದ ಅಭಾವದಿಂದ ತಮ್ಮ ಪ್ರದೇಶಗಳನ್ನೇ ತೊರೆಯುತ್ತಿವೆ ಎಂದು ಹೋರಾಟಗಾರ್ತಿ ಸಂಗೀತ ದೊಗ್ರಾ ಹೇಳುತ್ತಾರೆ.ಜನರು ಯಾಕೆ ರಸ್ತೆಯಲ್ಲಿ ಓಡಾಡುತ್ತಿಲ್ಲಎಂಬುದರ ಬಗ್ಗೆ ಗೊಂದಲಕ್ಕೆ ಒಳಗಾಗಿವೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಬ್ಬ ಶ್ವಾನ ತರಬೇತುದಾರ ಅಡ್ನಾನ್ ಖಾನ್, ಬೀದಿ ನಾಯಿಗಳು ಕೊಟ್ಟರೆ ಅಥವಾ ರಸ್ತೆ ಬದಿಯಲ್ಲಿ ಬಿದ್ದ ಆಹಾರವನ್ನು ತಿನ್ನುವ ಜಾತಿಯವು,ಅವುಗಳು ಬೆಕ್ಕನ್ನು ಕಚ್ಚಿ ಸಾಯಿಸಬಹುದು ಆದರೆ, ಆ ಬೆಕ್ಕನ್ನುತಿನ್ನುವುದಿಲ್ಲ ಎಂದರು.

ಕೆಲ ಏರಿಯಾಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೆ ಕೆಲವರು ಆಹಾರ ನೀಡುತ್ತಿರುವುದರಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಖಾನ್ ಹೇಳುತ್ತಾರೆ.ಈಗ ರಸ್ತೆಯಲ್ಲಿ ಜನರಿಲ್ಲ. ಕಾರುಗಳ ಓಡಾಟ ಇಲ್ಲ. ಅವುಗಳನ್ನು ಹೊಡೆದು ಓಡಿಸುವವರಿಲ್ಲ. ಈಗ ಅವು ಸಂತೋಷದಿಂದ ಇವೆ. ಇದು ಬೀದಿನಾಯಿಗಳಿಗೆ ಸಂತಸದ ಕಾಲ ಎಂದು ಖಾನ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.