ADVERTISEMENT

ಲಾಕ್‌ಡೌನ್ ಭೀತಿ: ಗುಜರಾತ್‌ ತೊರೆಯುತ್ತಿರುವ ವಲಸೆ ಕಾರ್ಮಿಕರು

ಬೃಹತ್‌ ಪ್ರಮಾಣದಲ್ಲಿ ಕಾರ್ಮಿಕರು ವಲಸೆ ಹೋಗುತ್ತಿಲ್ಲ: ಸರ್ಕಾರದ ಪ್ರತಿಕ್ರಿಯೆ

ಪಿಟಿಐ
Published 8 ಏಪ್ರಿಲ್ 2021, 10:41 IST
Last Updated 8 ಏಪ್ರಿಲ್ 2021, 10:41 IST
ಅಹಮದಾಬಾದ್‌ನ ಹೊರವಲಯದಲ್ಲಿರುವ ಕವಿತಾ ಹಳ್ಳಿಯಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆರೋಗ್ಯ ಕಾರ್ಯಕರ್ತರು ಬುಧವಾರ ಕೊರೊನಾ ಪರೀಕ್ಷೆ ನಡೆಸಿದರು.
ಅಹಮದಾಬಾದ್‌ನ ಹೊರವಲಯದಲ್ಲಿರುವ ಕವಿತಾ ಹಳ್ಳಿಯಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆರೋಗ್ಯ ಕಾರ್ಯಕರ್ತರು ಬುಧವಾರ ಕೊರೊನಾ ಪರೀಕ್ಷೆ ನಡೆಸಿದರು.   

ಅಹಮದಾಬಾದ್‌: ಗುಜರಾತ್‌ನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಏರುತ್ತಿರುವ ಕಾರಣ ಸರ್ಕಾರ ಮತ್ತೊಮ್ಮೆ ಲಾಕ್‌ಡೌನ್ ಮಾಡಬಹುದೆಂದು ಹೆದರಿರುವ ವಲಸೆ ಕಾರ್ಮಿಕರು, ಕೋವಿಡ್‌ ಹೆಚ್ಚು ಬಾಧಿಸಿರುವ ಅಹಮದಾಬಾದ್‌ ಮತ್ತು ಸೂರತ್ ನಗರಗಳನ್ನು ತೊರೆಯಲು ಆರಂಭಿಸಿದ್ದಾರೆ.

‘ಅಹಮದಾಬಾದ್‌ನಲ್ಲಿ, ಹೆಚ್ಚಾಗಿ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರು ಇದ್ದಾರೆ. ಅವರು ತಮ್ಮ ಸ್ಥಳಗಳಿಗೆ ಪ್ರಯಾಣಿಸಲು ನಗರದ ಪ್ರಮುಖ ಕಲುಪುರ ರೈಲು ನಿಲ್ದಾಣಕ್ಕೆ ಧಾವಿಸುತ್ತಿದ್ದಾರೆ‘ ಎಂದು ವಲಯ ರೈಲು ಬಳಕೆದಾರರ ಸಮಾಲೋಚನಾ ಸಮಿತಿಯ ಸದಸ್ಯ ಯೋಗೇಶ್ ಮಿಶ್ರಾ ಹೇಳಿದ್ದಾರೆ.

‘ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಲಾಕ್ ಡೌನ್ ವಿಧಿಸಬೇಕೆಂದು ಸೂಚಿಸಿದ್ದು, ವಲಸೆ ಕಾರ್ಮಿಕರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ‘ ಎಂದು ಮಿಶ್ರಾ ಹೇಳಿದರು.

ADVERTISEMENT

‘ಆದರೆ, ಅಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ನಗರಗಳನ್ನು ತೊರೆಯುತ್ತಿರುವ ಕುರಿತು ವರದಿಗಳು ಬಂದಿಲ್ಲ. ಆದರೂ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗೆ ತಿಳಿಸಿರುವುದಾಗಿ ರಾಜ್ಯ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಪುಲ್ ಮಿತ್ರ ತಿಳಿಸಿದ್ದಾರೆ.

ಸದ್ಯಕ್ಕೆ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡುವ ಯೋಚನೆ ಇಲ್ಲ. ಹಾಗೆಯೇ, ರೈಲುಗಳು ಸಂಚರಿಸುತ್ತಿರುವುದರಿಂದ ಜನರು ದೇಶದಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು‘ ಎಂದು ಮಿತ್ರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.