ADVERTISEMENT

ಬಜೆಟ್‌ ಅಧಿವೇಶನ: ಲೋಕಸಭೆಯಲ್ಲಿ 45 ಗಂಟೆಯಷ್ಟೇ ಕಲಾಪ 

ಪಿಟಿಐ
Published 6 ಏಪ್ರಿಲ್ 2023, 19:30 IST
Last Updated 6 ಏಪ್ರಿಲ್ 2023, 19:30 IST
   

ನವದೆಹಲಿ: ‘ಈ ಬಾರಿಯ ಬಜೆಟ್‌ ಅಧಿವೇಶನದ ವೇಳೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕ್ರಮವಾಗಿ ಕೇವಲ 45 ಗಂಟೆ ಮತ್ತು 31 ಗಂಟೆ ಕಲಾಪ ನಡೆದಿದೆ’ ಎಂದು ‘ಥಿಂಕ್‌ ಟಾಂಕ್‌ ಆರ್ಗನೈಸೇಷನ್‌’ ಗುರುವಾರ ಹೇಳಿದೆ.

‘ಬಜೆಟ್‌ ಅಧಿವೇಶನದ ವೇಳೆ ಲೋಕಸಭೆಯು 133.6 ಗಂಟೆ ಹಾಗೂ ರಾಜ್ಯಸಭೆ 130 ಗಂಟೆ ಕಾರ್ಯನಿರ್ವಹಿಸಬೇಕಿತ್ತು. ಆದರೆ ಪದೇ ಪದೇ ಅಡ್ಡಿ ಉಂಟಾಗಿದ್ದರಿಂದ ತೀರಾ ಕಡಿಮೆ ಅವಧಿಯ ಕಲಾಪ ನಡೆದಿದೆ ’ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT