ADVERTISEMENT

‘ಕರಾವಳಿ ಹಡಗು ಸರಕು ಸಾಗಣೆ ಮಸೂದೆ’ ಅಂಗೀಕಾರ

ಪಿಟಿಐ
Published 3 ಏಪ್ರಿಲ್ 2025, 15:09 IST
Last Updated 3 ಏಪ್ರಿಲ್ 2025, 15:09 IST
   

ನವದೆಹಲಿ: ದೇಶದ ಕರಾವಳಿಯಲ್ಲಿ ವಾಣಿಜ್ಯ ವಹಿವಾಟು ನಡೆಸುವ ಹಡಗುಗಳ ನಿಯಂತ್ರಣಕ್ಕೆ ಅವಕಾಶ ಕಲ್ಪಿಸುವ ‘ಕರಾವಳಿ ಹಡಗು ಸರಕು ಸಾಗಣೆ ಮಸೂದೆ 2024’ ಅನ್ನು ಲೋಕಸಭೆ ಅಂಗೀಕರಿಸಿದೆ.

ಮಸೂದೆಯನ್ನು ಗುರುವಾರ ಧ್ವನಿಮತದಿಂದ ಅಂಗೀಕರಿಸಲಾಯಿತು. ಈ ಕುರಿತ ಚರ್ಚೆಗೆ ಉತ್ತರಿಸಿದ ಬಂದರು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೊನೊವಾಲ್, ‘ಕರಾವಳಿ ವ್ಯಾಪ್ತಿಯಲ್ಲಿ ವಾಣಿಜ್ಯ ವಹಿವಾಟಿನ ಅವಕಾಶಗಳನ್ನು ಪೂರ್ಣ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಇದು ಪ್ರಮುಖವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT