ADVERTISEMENT

ಕೋವಿಡ್‌: ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕಿ ಕಲಾವತಿ ಭುರಿಯಾ ನಿಧನ

ಪಿಟಿಐ
Published 24 ಏಪ್ರಿಲ್ 2021, 5:33 IST
Last Updated 24 ಏಪ್ರಿಲ್ 2021, 5:33 IST
   

ಇಂದೋರ್‌: ‘ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕಿ ಕಲಾವತಿ ಭುರಿಯಾ (49) ಕೋವಿಡ್‌ನಿಂದಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು’ ಎಂದು ಮೂಲಗಳು ತಿಳಿಸಿವೆ.

‘12 ದಿನಗಳ ಹಿಂದೆ ಕಲಾವತಿ ಅವರನ್ನು ಇಂದೋರ್‌ನ ಶಲ್ಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಕೋವಿಡ್‌ ಚಿಕಿತ್ಸೆ ನೀಡಲಾಗುತ್ತಿತ್ತು.ಕಲಾವತಿ ಅವರ ಶ್ವಾಸಕೋಶ ಶೇಕಡ 70ರಷ್ಟು ಸೋಂಕಿಗೆ ಒಳಾಗಾಗಿತ್ತು. ಅವರಿಗೆ ವೆಂಟಿಲೇಟರ್ ನೆರವು ನೀಡಲಾಗಿತ್ತು. ಅಲ್ಲದೆ ಅವರ ಸ್ಥಿತಿಯು ಪ್ರತಿನಿತ್ಯ ಕ್ಷೀಣಿಸುತ್ತಿತ್ತು. ಅವರನ್ನು ಉಳಿಸಲು ನಮಗೆ ಸಾಧ್ಯವಾಗಿಲ್ಲ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಿವೇಕ್ ಜೋಶಿ ಅವರು ತಿಳಿಸಿದರು.

2018ರಲ್ಲಿ ಕಲಾವತಿ ಅವರು ಜೋಬತ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರು ಮಾಜಿ ಕೇಂದ್ರ ಸಚಿವ ಕಾಂತಿಲಾಲ್‌ ಭುರಿಯಾ ಅವರ ಸೋದರ ಸೊಸೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.