ADVERTISEMENT

ಕೋವಿಡ್‌ನಿಂದ ಚೇತರಿಸಿಕೊಳ್ಳುವುದಾಗಿ ಸತ್ತ ಹಾವು ತಿಂದ... ಮುಂದೇನಾಯ್ತು?

ಏಜೆನ್ಸೀಸ್
Published 29 ಮೇ 2021, 12:08 IST
Last Updated 29 ಮೇ 2021, 12:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಕೋವಿಡ್‌ನಿಂದ ಗುಣಮುಖನಾಗಲು ಸತ್ತ ಹಾವನ್ನು ತಿಂದು ವಿಡಿಯೊ ಚಿತ್ರೀಕರಿಸಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಆತನಿಗೆ ₹ 7 ಸಾವಿರ ದಂಡ ವಿಧಿಸಿರುವ ಘಟನೆ ಮಧುರೈನಲ್ಲಿ ನಡೆಸಿದೆ.

50 ವರ್ಷದ ವಡಿವೇಲು ಬಂಧಿತ ಆರೋಪಿಯಾಗಿದ್ದಾರೆ. ಹಾವುಗಳನ್ನು ಸೇವಿಸುವುದರಿಂದ ಕೋವಿಡ್‌ ಸೇರಿದಂತೆ ವಿವಿಧ ಬಗೆಯ ಕಾಯಿಲೆಗಳಿಂದ ಗುಣಮುಖವಾಗಬಹುದು ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದರು. ಬಳಿಕ ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಪೆರುಮಾಲ್ಪಟ್ಟಿ ಪ್ರದೇಶದಲ್ಲಿ ವಡಿವೇಲು ಅವರನ್ನು ಬಂಧಿಸಲಾಗಿದೆ ಎಂದು ಮಧುರೈ ಜಿಲ್ಲಾ ಅರಣ್ಯ ಅಧಿಕಾರಿ(ಡಿಎಫ್‌ಒ) ಎಸ್.ಆನಂದ್ ತಿಳಿಸಿದ್ದಾರೆ.

ADVERTISEMENT

ಜನರನ್ನು ಪ್ರಚೋದಿಸಿ ಕೋವಿಡ್‌ ಪರಿಸ್ಥಿತಿಯ ಲಾಭ ಪಡೆಯಲು ಈ ರೀತಿ ಮಾಡಿರುವುದಾಗಿ ವಡಿವೇಲು ತಪ್ಪೊಪ್ಪಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.