ಪುಷ್ಪ 2–ದಿ ರೂಲ್ ಚಿತ್ರದ ಪೋಸ್ಟರ್
(ಚಿತ್ರ ಕೃಪೆ–@alluarjun)
ಗ್ವಾಲಿಯರ್: ಪುಷ್ಪ–2 ಚಿತ್ರ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕನೊಬ್ಬನೊಂದಿಗೆ ಥಿಯೇಟರ್‌ನಲ್ಲಿನ ಕ್ಯಾಂಟೀನ್ ಮಾಲೀಕನೊಬ್ಬ ವಾಗ್ವಾದ ನಡೆಸಿದ್ದು ಆತನ ಕಿವಿಗೆ ಕಚ್ಚಿದ್ದಾನೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಶಬ್ಬೀರ್ ಎನ್ನುವಾತ ಸಿನಿಮಾ ಮಧ್ಯಂತರದಲ್ಲಿ ತಿಂಡಿ ಖರೀದಿಸಲು ಚಿತ್ರಮಂದಿರದ ಕ್ಯಾಂಟೀನ್ ಬಳಿ ಬಂದಾಗ ಹಣ ಪಾವತಿಯ ವಿಚಾರಕ್ಕೆ ಮಾಲೀಕ ರಾಜುವಿನೊಂದಿಗೆ ವಾಗ್ವಾದ ನಡೆದಿದೆ. ಈ ವೇಳೆ ರಾಜು ಅವರ ಸಹಚರರು ಶಬ್ಬೀರ್ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಗಲಾಟೆ ವೇಳೆ ಶಬ್ಬೀರ್ ಕಿವಿಗೆ ರಾಜು ಕಚ್ಚಿದ್ದಾರೆ ಎನ್ನುವುದಾಗಿ ಎಫ್‌ಐಆರ್‌ನಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ–2 ದಿ ರೂಲ್ ಬಿಡುಗಡೆಯಾದ ಒಂದು ವಾರಕ್ಕೆ ಸಾವಿರ ಕೋಟಿ ಗಳಿಕೆ ಮಾಡಿದೆ ಎಂದು ಸಿನಿಮಾ ನಿರ್ಮಾಪಕರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.