ADVERTISEMENT

'ಮಹಾ ಸಿಎಂ' ಫಡಣವೀಸ್‌ ಸಮ್ಮುಖದಲ್ಲಿ ಭೂಪತಿ ಸೇರಿ 61 ನಕ್ಸಲರು ಶರಣು

ಪಿಟಿಐ
Published 15 ಅಕ್ಟೋಬರ್ 2025, 7:42 IST
Last Updated 15 ಅಕ್ಟೋಬರ್ 2025, 7:42 IST
<div class="paragraphs"><p>ಫಡಣವೀಸ್‌ ಸಮ್ಮುಖದಲ್ಲಿ ಭೂಪತಿ ಸೇರಿ&nbsp;61 ನಕ್ಸಲರು ಶರಣು</p></div>

ಫಡಣವೀಸ್‌ ಸಮ್ಮುಖದಲ್ಲಿ ಭೂಪತಿ ಸೇರಿ 61 ನಕ್ಸಲರು ಶರಣು

   Prithvi

ಗಡ್‌ಚಿರೋಲಿ: ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಹಿರಿಯ ನಕ್ಸಲೈಟ್ ಮಲ್ಲೊಜುಲ ವೇಣುಗೋಪಾಲ್ ಅಲಿಯಾಸ್ ಭೂಪತಿ ಮತ್ತು ಇತರ 61 ನಕ್ಸಲರು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಸಮ್ಮುಖದಲ್ಲಿ ಶರಣಾದರು.

61 ನಕ್ಸಲರು ಒಟ್ಟು 54 ಶಸ್ತ್ರಾಸ್ತ್ರಗಳೊಂದಿಗೆ ಶರಣಾದರು. ಶಸ್ತ್ರಾಸ್ತ್ರಗಳ ಪೈಕಿ ಏಳು ಎಕೆ-47 ಗನ್‌ಗಳು, 9 ರೈಫಲ್‌ಗಳು, ನಾಡ ಪಿಸ್ತೂಲ್‌ಗಳು ಹಾಗೂ ಸ್ಫೋಟಕ ಸಾಮಗ್ರಿಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಭೂಪತಿ ಬಗ್ಗೆ ಸುಳಿವು ಕೊಟ್ಟವರಿಗೆ ಸರ್ಕಾರ ₹ 6 ಕೋಟಿ ಬಹುಮಾನ ಘೋಷಿಸಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಸೋನು ಎಂದು ಸಹ ಪರಿಚಿತರಾಗಿದ್ದ ಭೂಪತಿ, ಮಾವೋವಾದಿ ಸಂಘಟನೆಯ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಹಾಗೂ ಛತ್ತೀಸ್‌ಗಢ ಗಡಿಭಾಗದಲ್ಲಿ ನಡೆಯುತ್ತಿದ್ದ ನಕ್ಸಲ್‌ ಕಾರ್ಯಾಚರಣೆಗಳನ್ನು ದೀರ್ಘಕಾಲದಿಂದ ಮೇಲ್ವಿಚಾರಣೆ ಮಾಡುತ್ತಿದ್ದರು.

ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವಿವಿಧ ರಾಜ್ಯಗಳ ಅಭಿವೃದ್ಧಿ, ಕಲ್ಯಾಣ ಕಾರ್ಯಕ್ರಮಗಳು ಮತ್ತು ಪುನರ್ವಸತಿ ನೀತಿಯಿಂದ ಆಕರ್ಷಿತರಾದ ಮಾವೋವಾದಿ ಕಾರ್ಯಕರ್ತರು ನಕ್ಸಲಿಸಂ ಮಾರ್ಗವನ್ನು ತ್ಯಜಿಸಿ ತಮ್ಮ ಕುಟುಂಬಗಳೊಂದಿಗೆ ಶಾಂತಿಯುತ ಜೀವನವನ್ನು ನಡೆಸಲು ನಿರ್ಧಾರ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.