
ಸಾಂದರ್ಭಿಕ ಚಿತ್ರ
ಕೃಪೆ: ಎಐ
ಪುಣೆ: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ 14 ವರ್ಷದ ಬಾಲಕನೊಬ್ಬ ಅಭ್ಯರ್ಥಿ ಹಾಗೂ ಆತನ ತಂದೆಯ ಜೊತೆ ಮತ ಚಲಾಯಿಸುತ್ತಿರುವಂತೆ ತೋರಿಸುವ ವಿಡಿಯೊ ಹರಿದಾಡುತ್ತಿದೆ.
ಶನಿವಾರ ನಡೆದ ಮತದಾನದ ಸಮಯದಲ್ಲಿ ಅರ್ಜುನ್ ಸಿನ್ಹ ಮೋಹಿತೆ ಪಾಟೀಲ್ ಅವರ ಮಗ ಅಕ್ಲುಜ್‌ನ ಯಶವಂತ್ ನಗರದಲ್ಲಿರುವ ಮತಗಟ್ಟೆಯಲ್ಲಿ ತಂದೆಯ ಜೊತೆ ನಿಂತು ಇವಿಎಂ ಬಟನ್ ಒತ್ತುತ್ತಿರುವುದು ಕಂಡುಬಂದಿದೆ.
ಈ ಕುರಿತು ಅರ್ಜುನ್ ಸಿನ್ಹ ಮೋಹಿತೆ ಪಾಟೀಲ್, ತಮ್ಮ ಮಗ ಮತದಾನದ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದಾರೆ.
‘ನನ್ನ ಮಗನಿಗೆ ಮತ ಚಲಾಯಿಸುವುದು ಹೇಗೆ ಎಂದು ನೋಡುವ ಆಸೆ ಇತ್ತು, ಅದಕ್ಕಾಗಿಯೇ ನಾನು ಆತನನ್ನು ಒಳಗೆ ಕರೆದುಕೊಂಡು ಹೋಗಿದ್ದೆ. ಮತಗಟ್ಟೆ ಅಧಿಕಾರಿಗಳು ಆಕ್ಷೇಪಣೆ ವ್ಯಕ್ತಪಡಿಸಿದರು, ಆದರೆ ನಾನು ಮತ ಚಲಾಯಿಸುವಾಗ ಅವನಿಗೆ ನನ್ನ ಪಕ್ಕದಲ್ಲಿ ನಿಲ್ಲಲು ಅವಕಾಶ ನೀಡುವಂತೆ ಕೇಳಿಕೊಂಡೆ. ಇದರಲ್ಲಿ ಯಾವುದೇ ತಪ್ಪಾಗಿದೆ ಎಂದು ನನಗೆ ಅನಿಸುತ್ತಿಲ್ಲ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.