ADVERTISEMENT

ಹರಿಯಾಣದಲ್ಲಿ ಶೇ.22.25, ಮಹಾರಾಷ್ಟ್ರದಲ್ಲಿ ಶೇ.14.54 ಮತದಾನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 7:46 IST
Last Updated 21 ಅಕ್ಟೋಬರ್ 2019, 7:46 IST
   

ನವದೆಹಲಿ:ಮಹಾರಾಷ್ಟ್ರದ 288 ಮತ್ತು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 11 ಗಂಟೆ ಹೊತ್ತಿಗೆ ಹರಿಯಾಣದಲ್ಲಿ ಹರಿಯಾಣದಲ್ಲಿ ಶೇ.22.25, ಮಹಾರಾಷ್ಟ್ರದಲ್ಲಿ ಶೇ.14.54 ಮತದಾನವಾಗಿದೆ.ಗುರುವಾರ (ಅ.24) ಫಲಿತಾಂಶ ಪ್ರಕಟವಾಗಲಿದೆ.

ಎರಡೂ ರಾಜ್ಯಗಳ ಒಟ್ಟು 368 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನಒಂದೇ ಹಂತದಲ್ಲಿ ಮುಕ್ತಾಯವಾಗಲಿದೆ.ಇದರ ಜತೆಯಲ್ಲೇ 17 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ಒಟ್ಟು 51 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೂ ಮತದಾನ ನಡೆಯಲಿದೆ.

ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ತೆರವಾಗಿರುವ 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೂ ಮತದಾನ ನಡೆಯಲಿದ್ದು,ಎಲ್ಲೆಡೆ ಬಿಗಿಭದ್ರತೆ ಕಲ್ಪಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.