ADVERTISEMENT

ಮಹಾರಾಷ್ಟ್ರ: ಡಿಸಿಎಂ ಶಿಂಧೆ ಕಾರಿಗೆ ಬಾಂಬ್ ಹಾಕುವುದಾಗಿ ಬೆದರಿಕೆ; ಇಬ್ಬರ ಬಂಧನ

ಪಿಟಿಐ
Published 21 ಫೆಬ್ರುವರಿ 2025, 6:08 IST
Last Updated 21 ಫೆಬ್ರುವರಿ 2025, 6:08 IST
<div class="paragraphs"><p>ಬಾಂಬ್ ಬೆದರಿಕೆ</p></div>

ಬಾಂಬ್ ಬೆದರಿಕೆ

   

(ಸಾಂದರ್ಭಿಕ ಚಿತ್ರ)

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಕಾರಿಗೆ ಬಾಂಬ್‌ ಹಾಕುವುದಾಗಿ ಇ –ಮೇಲ್‌ನಲ್ಲಿ ಸಂದೇಶ ಕಳುಹಿಸಿ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಬುಲ್ದಾನಾ ಜಿಲ್ಲೆಯಲ್ಲಿ ಇಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ

ADVERTISEMENT

ಆರೋಪಿಗಳನ್ನು ಮಂಗೇಶ್‌ ವಾಯಲ್‌ (35), ಅಭಯ್ ಶಿಂಗಾನೆ (22) ಎಂದು ಗುರುತಿಸಲಾಗಿದೆ. 

ಶಿಂಧೆ ಅವರ ಕಾರಿಗೆ ಬಾಂಬ್‌ ಹಾಕುವುದಾಗಿ ಗುರುವಾರ ಜಾರ್ಜನ್‌ ಮತ್ತು ಜೆಜೆ ಮಾರ್ಗ್‌ ಪೊಲೀಸ್‌ ಠಾಣೆಗೆ ಇ ಮೇಲ್‌ನಲ್ಲಿ ಬೆದರಿಕೆ ಸಂದೇಶ ಬಂದಿತ್ತು. ಈ ಸಂಬಂಧ ಜಾರ್ಜನ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರ ಸಹಾಯದಿಂದ ಮುಂಬೈ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಅವರನ್ನು ಮುಂಬೈಗೆ ಕರೆತರಲಾಗಿದ್ದು, ತನಿಖೆ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.