ಕೋಲ್ಕತ್ತ:ಕೇಂದ್ರ ಸರ್ಕಾರವು ನನ್ನ ದೂರವಾಣಿಯನ್ನು ಕದ್ದಾಲಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಇಸ್ರೇಲ್‌ನ ‘ಎನ್‌ಎಸ್‌ಒ ಗ್ರೂಪ್’ ಗೂಢಚರ್ಯೆ ತಂತ್ರಾಂಶವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಅದನ್ನು ಬಳಸಿಕೊಂಡು ನನ್ನ ದೂರವಾಣಿ ಕದ್ದಾಲಿಸಲಾಗುತ್ತಿದೆ. ಇದಕ್ಕೆ ನನ್ನ ಬಳಿ ಸಾಕ್ಷ್ಯ ಇದೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ:ವಾಟ್ಸ್ಆ್ಯಪ್ ಬಳಸಿ ಮೊಬೈಲ್ಗೆ ಕನ್ನ
‘ಎನ್‌ಎಸ್‌ಒ ಗ್ರೂಪ್’ ಅಭಿವೃದ್ಧಿಪಡಿಸಿರುವತಂತ್ರಾಂಶ ‘ಪೆಗಾಸಸ್’ ಬಳಸಿಕೊಂಡು ವಾಟ್ಸ್‌ಆ್ಯಪ್ ಕರೆ, ಸಂದೇಶ ಮತ್ತು ಇತರ ಮಾಹಿತಿ ಕದಿಯಲಾಗುತ್ತಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜಕಾರಣಿಗಳು, ಮಾಧ್ಯಮ ಸಿಬ್ಬಂದಿ, ವಕೀಲರು ಮತ್ತು ಸಾಮಾಜಿಕ ಹೋರಾಟಗಾರರನ್ನು ಗುರಿಯಾಗಿಸಿ ಕೇಂದ್ರ ಸರ್ಕಾರಬೇಹುಗಾರಿಕೆ ನಡೆಸುತ್ತಿದೆ’ ಎಂದು ಆರೋಪಿಸಿದ್ದಾರೆ.
ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಗಮನಹರಿಸಬೇಕು. ಸಮಗ್ರ ತನಿಖೆಯಾಗಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ವಾಟ್ಸ್ಆ್ಯಪ್ ನಡೆ: ಸರ್ಕಾರಕ್ಕೆ ಸಂದೇಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.