ADVERTISEMENT

GST ದರ ಇಳಿಕೆ |ಕೇಂದ್ರ ಅನಗತ್ಯ ಶ್ರೇಯ ತೆಗೆದುಕೊಳ್ಳುತ್ತಿದೆ: ಮಮತಾ ಬ್ಯಾನರ್ಜಿ

ಪಿಟಿಐ
Published 21 ಸೆಪ್ಟೆಂಬರ್ 2025, 16:09 IST
Last Updated 21 ಸೆಪ್ಟೆಂಬರ್ 2025, 16:09 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ‘ಜಿಎಸ್‌ಟಿ ದರಗಳನ್ನು ಕಡಿಮೆ ಮಾಡುವ ಕ್ರಮಗಳಿಗೆ ಚಾಲನೆ ನೀಡಿದ್ದೇ ಪಶ್ಚಿಮ ಬಂಗಾಳ. ದರಗಳನ್ನು ಈಗ ಕಡಿಮೆ ಮಾಡಲಾಗಿದ್ದು, ಅನಗತ್ಯವಾಗಿ ಇದರ ಶ್ರೇಯವನ್ನು ಕೇಂದ್ರ ಸರ್ಕಾರ ತಾನು ತೆಗೆದುಕೊಳ್ಳುತ್ತಿದೆ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಟೀಕಿಸಿದ್ದಾರೆ.

ಜಿಎಸ್‌ಟಿ ದರ ಕಡಿಮೆಯಾಗಿರುವ ಪ್ರಯುಕ್ತ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ ಬೆನ್ನಲ್ಲೇ, ಮಮತಾ ಬ್ಯಾನರ್ಜಿ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ರಾಜ್ಯವು ತನ್ನ ಪಾಲಿನ ರಾಜಸ್ವ ಆದಾಯದಲ್ಲಿ ₹20 ಸಾವಿರ ಕೋಟಿ ಕಳೆದುಕೊಳ್ಳಲಿದ್ದರೂ, ಜಿಎಸ್‌ಟಿ ದರಗಳಲ್ಲಿ ಕಡಿತವಾಗಿರುವುದಕ್ಕೆ ನಮಗೆ ಸಂತಸವಿದೆ. ಈ ದರಗಳನ್ನು ಕಡಿಮೆ ಮಾಡಬೇಕು ಎಂದು ನಾವೇ ಮನವಿ ಮಾಡಿದ್ದೆವು. ಜಿಎಸ್‌ಟಿ ಮಂಡಳಿ ಸಭೆಗಳಲ್ಲಿಯೂ ಈ ಕುರಿತು ಸಲಹೆಗಳನ್ನೂ ನೀಡಿದ್ದೆವು. ಆದರೆ, ನೀವು ಏಕೆ ಇದರ ಶ್ರೇಯ ತೆಗೆದುಕೊಳ್ಳುತ್ತಿದ್ದೀರಿ’ ಎಂದು ಮೋದಿ ಅವರ ಹೆಸರು ಉಲ್ಲೇಖಿಸದೇ ಅವರು ಕುಟುಕಿದ್ದಾರೆ.

ADVERTISEMENT
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದ ಅನುದಾನವನ್ನು ಮೋದಿ ನೇತೃತ್ವದ ಸರ್ಕಾರ ಬಿಡುಗಡೆ ಮಾಡಿಲ್ಲ. ಭಾಷಣ ಮಾಡುವುದನ್ನು ಬಿಟ್ಟು ಬೇರೆ ಯಾವ ಕೆಲಸವನ್ನೂ ಕೇಂದ್ರ ಸರ್ಕಾರ ಮಾಡುತ್ತಿಲ್ಲ
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.