ADVERTISEMENT

ಉಪಚುನಾವಣೆ: ಮಮತಾ ಸಹಿತ ಟಿಎಂಸಿ ಅಭ್ಯರ್ಥಿಗಳು ಮುನ್ನಡೆಯಲ್ಲಿ

ಪಿಟಿಐ
Published 3 ಅಕ್ಟೋಬರ್ 2021, 6:33 IST
Last Updated 3 ಅಕ್ಟೋಬರ್ 2021, 6:33 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ/ಬೆಹ್ರಂಪೋರ್: ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಭವಾನಿಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 3ನೇ ಸುತ್ತಿನ ಮತ ಎಣಿಕೆಯ ಬಳಿಕ 6,146 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಮುರ್ಶಿದಾಬಾದ್‌ನ ಸಾಮ್ಸರ್‌ಗಂಜ್‌ ಮತ್ತು ಜಂಗಿಪುರ ಕ್ಷೇತ್ರಗಳಲ್ಲೂ ಟಿಎಂಸಿ ಅಭ್ಯರ್ಥಿಗಳು ಮುನ್ನಡೆ ಗಳಿಸಿದ್ದಾರೆ.

ಭವಾನಿಪುರದಲ್ಲಿ ಟಿಎಂಸಿ ಅಭ್ಯರ್ಥಿ ಆಗಿರುವ ಮಮತಾ ಬ್ಯಾನರ್ಜಿ ಅವರು9,974 ಮತ ಗಳಿಸಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್‌3,828 ಮತಗಳನ್ನು ಗಳಿಸಿದ್ದಾರೆ.

ಸಮ್ಸೆರ್‌ಗಂಜ್‌ನಲ್ಲಿ ಟಿಎಂಸಿಯ ಅಮಿರುಲ್‌ ಇಸ್ಲಾಂ 11,432 ಮತಗಳನ್ನು ಗಳಿಸಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಝೈದರ್ ರೆಹಮಾನ್‌9,689 ಮತಗಳನ್ನು ಗಳಿಸಿದ್ದಾರೆ.

ADVERTISEMENT

ಜಂಗಿಪುರ್‌ದಲ್ಲಿ ಟಿಎಂಸಿಯ ಝಕೀರ್ ಹುಸೇನ್‌ ಅವರು4,542 ಮತಗಳನ್ನು ಗಳಿಸಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸುಜಿತ್ ದಾಸ್ 2,825 ಮತಗಳನ್ನು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.