ADVERTISEMENT

Air India | ವಿಮಾನದ ನೆಲಹಾಸಿನ ಮೇಲೆ ಮಲ, ಮೂತ್ರ ವಿಸರ್ಜಿಸಿದ ಪ್ರಯಾಣಿಕನ ಬಂಧನ

ಪಿಟಿಐ
Published 27 ಜೂನ್ 2023, 3:03 IST
Last Updated 27 ಜೂನ್ 2023, 3:03 IST
ಏರ್ ಇಂಡಿಯಾ
ಏರ್ ಇಂಡಿಯಾ   

ನವದೆಹಲಿ: ಮುಂಬೈ–ದೆಹಲಿ ಏರ್ ಇಂಡಿಯಾ ವಿಮಾನದ ಹಾರಾಟದಲ್ಲಿರುವಾಗಲೇ ನೆಲಹಾಸಿನ ಮೇಲೆಯೇ ಮಲ, ಮೂತ್ರ ವಿಸರ್ಜಿಸಿದ ಆರೋಪದಡಿ ಪ್ರಯಾಣಿಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಜೂನ್ 24ರಂದು ‘ಎಐಸಿ 866’ ವಿಮಾನದಲ್ಲಿ ನಡೆದಿದೆ. ಎಫ್‌ಐಆರ್‌ನ ಪ್ರಕಾರ, ರಾಮ್‌ ಸಿಂಗ್‌ ಬಂಧಿತ ಆರೋಪಿ. ಈತ ನೆಲದ ಮೇಲೆ ಮಲ, ಮೂತ್ರವಿಸರ್ಜನೆ ಜೊತೆಗೆ 9ನೇ ಸಂಖ್ಯೆ ಸಾಲಿನ ಸೀಟುಗಳ ಮೇಲೆ ಗಲೀಜು ಎರಚಾಡಿದ್ದ.

ಈತನ ದುರ್ವರ್ತನೆಯನ್ನು ಗಮನಿಸಿದ್ದ ಸಿಬ್ಬಂದಿ ಕಠಿಣ ಎಚ್ಚರಿಕೆಯನ್ನು ನೀಡಿದ್ದರು. ಅಲ್ಲದೆ, ಪೈಲಟ್‌ ಈ ಬಗ್ಗೆ ಕಂಪನಿಗೆ ಮಾಹಿತಿ ನೀಡಿದ್ದರು. ವಿಮಾನ ಬರುತ್ತಿದ್ದಂತೆ ಭದ್ರತಾ ಸಿಬ್ಬಂದಿ ಆತನನ್ನು ಸ್ಥಳೀಯ ಠಾಣೆಗೆ ಕರೆದೊಯ್ದರು.

ADVERTISEMENT

ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 294 (ಅಸಭ್ಯ ವರ್ತನೆ) ಹಾಗೂ ಸೆಕ್ಷನ್‌ 510ರ (ಸಾರ್ವಜನಿಕವಾಗಿ ದುರ್ನಡತೆ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ಹಿಂದೆ 2022ರ ನವೆಂಬರ್‌ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಆಗಮಿಸಿದ್ದ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿತ್ತು.

ಇದಾದ ಕೆಲವೇ ದಿನಗಳಲ್ಲಿ (ಡಿಸೆಂಬರ್‌ 6ರಂದು) ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನೊಬ್ಬ ಮಹಿಳೆಯ ಮೇಲೆ ಮೂರ್ತ ಮಾಡಿದ್ದ. ಪ್ಯಾರಿಸ್‌ನಿಂದ ದೆಹಲಿಗೆ ಆಗಮಿಸಿದ್ದ ವಿಮಾನದಲ್ಲಿ ಈ ಪ್ರಕರಣ ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.