ADVERTISEMENT

ಮಣಿಪುರ: ನಾಪತ್ತೆ ಆಗಿರುವ ವ್ಯಕ್ತಿ ಮನೆ ಬಳಿ ಗ್ರೆನೇಡ್‌ ಪತ್ತೆ

ಪಿಟಿಐ
Published 2 ಜನವರಿ 2025, 15:44 IST
Last Updated 2 ಜನವರಿ 2025, 15:44 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಇಂಫಾಲ್: ಲೈಮಖಾಂಗ್‌ನಲ್ಲಿರುವ ಸೇನಾ ಠಾಣೆಯಿಂದ ನಾಪತ್ತೆಯಾಗಿರುವ ಲೈಶ್ರಮ್‌ ಕಮಲ್‌ಬಾಬು ಸಿಂಗ್‌ ಅವರ ಮನೆಯ ಬಳಿ ಗ್ರೆನೇಡ್ ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದರು. 

ಪಶ್ಚಿಮ ಇಂಫಾಲ್‌ ಜಿಲ್ಲೆಯ ಲೊಯಿತಾಂಗ್‌ ಖುನೌನಲ್ಲಿರುವ ಸಿಂಗ್‌ ಮನೆಯ ಗೇಟ್‌ ಬಳಿ ‌ಗ್ರೆನೇಡ್‌ ಪತ್ತೆಯಾಗಿತ್ತು. ಇದರಿಂದ ಸ್ಥಳೀಯರು ಆತಂಕಗೊಂಡಿದ್ದರು. ನಂತರ ಗ್ರೆನೇಡ್‌ ಅನ್ನು ನಿಷ್ಕ್ರಿಯಗೊಳಿಸಲಾಯಿತು ಎಂದು ಮಾಹಿತಿ ನೀಡಿದರು. 

ADVERTISEMENT

ಗ್ರೆನೇಡ್‌ನೊಂದಿಗೆ ಸ್ಥಳದಲ್ಲಿ ಪತ್ರವೊಂದು ದೊರೆತಿದೆ. ಇದರಲ್ಲಿ ‘ನಾಪತ್ತೆಯಾಗಿರುವ ಸಿಂಗ್‌ ಹುಡುಕಾಟಕ್ಕಾಗಿ ರಚಿಸಲಾಗಿರುವ ಜಂಟಿ ಕ್ರಿಯಾ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯನ್ನು ರಚಿಸಬೇಕು. ಭೂಮಿಯನ್ನು ಮಾರಾಟ ಮಾಡುವ ಯಾರೂ ಸಮಿತಿಯಲ್ಲಿ ಇರಬಾರದು’ ಎಂದು ಬರೆಯಲಾಗಿದೆ. 

ಅಸ್ಸಾಂ ಮೂಲದ ಸಿಂಗ್, ಗುತ್ತಿಗೆದಾರರ ಪರವಾಗಿ ಸೇನೆಯ ಎಂಜಿನಿಯರಿಂಗ್‌ ಸೇವೆಯಲ್ಲಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಕಳೆದ ನವೆಂಬರ್‌ 25ರಿಂದ‌ ನಾಪತ್ತೆಯಾಗಿದ್ದಾರೆ. 

ಸಿಂಗ್‌ ನಾಪತ್ತೆಯಾಗಿರುವುದಾಗಿ ತಿಳಿಸಿದ ಮುಖ್ಯಮಂತ್ರಿ ಎನ್‌ ಬಿರೇನ್‌ ಸಿಂಗ್‌ ಅವರು, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿರುವುದಾಗಿ ಕಳೆದ ವಾರ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.