ಇಂಫಾಲ: ಮಣಿಪುರದ ಪಶ್ಚಿಮ ಮತ್ತು ಪೂರ್ವ ಇಂಫಾಲ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಮೂವರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ನಿಷೇಧಿತ ಸಂಘಟನೆ ಪೀಪಲ್ಸ್ ಲಿಬರೇಶನ್ ಆರ್ಮಿಗೆ (ಪಿಎಲ್‌ಎ) ಸೇರಿದ ದಂಗೆಕೋರನನ್ನು ಪಶ್ಚಿಮ ಇಂಫಾಲ ಜಿಲ್ಲೆಯ ಲ್ಯಾಮ್ಡೆಂಗ್ ಅವಾಂಗ್ ಲೈಕೈನಿಂದ ಬಂಧಿಸಲಾಗಿದೆ.
ಬಂಧಿತನನ್ನು ಯುಮ್ನಾಮ್ ಪ್ರೇಮ್‌ಕುಮಾರ್ ಸಿಂಗ್ (31) ಎಂದು ಗುರುತಿಸಲಾಗಿದ್ದು, ಸರ್ಕಾರಿ ಮತ್ತು ಖಾಸಗಿ ಶಾಲೆ ಸೇರಿದಂತೆ ಇತರೆ ಸಂಸ್ಥೆಗಳಿಂದ ಸುಲಿಗೆ ಮಾಡುತ್ತಿದ್ದನು ಎಂದು ಪೊಲೀಸರು ಹೇಳಿದ್ದಾರೆ.
ನಿಷೇಧಿತ ಪ್ರೆಪಕ್-(ಪ್ರೊ) ಸಂಘಟನೆಯ ಸಕ್ರಿಯ ಕಾರ್ಯಕರ್ತನನ್ನು ಪಶ್ಚಿಮ ಇಂಫಾಲ ಜಿಲ್ಲೆಯ ಹೈರಂಗೋಯಿಥಾಂಗ್‌ನಿಂದ ಬಂಧಿಸಲಾಗಿದೆ. ಕೆಸಿಪಿನ (ಎಂಎಫ್ಎಲ್) ಮತ್ತೊಬ್ಬ ಉಗ್ರನನ್ನು ಪೂರ್ವ ಇಂಫಾಲ ಜಿಲ್ಲೆಯ ನಾಂಗ್‌ಪೋಕ್ ಸಂಜೆನ್‌ಬಾಮ್ ಖುಲ್ಲೆನ್‌ನಿಂದ ಬಂಧಿಸಲಾಗಿದೆ.
ಬಿಷ್ಣುಪುರ ಜಿಲ್ಲೆಯ ಟೆರಾಖೋಂಗ್‌ಶಾಂಗ್ಬಿ ಮಾನಿಂಗ್ ಲೈಥೆಲ್‌ನಲ್ಲಿ ಇರಿಸಲಾಗಿದ್ದ 51 ಎಂಎಂ ಐಎಲ್‌ಎಲ್‌ಜಿ ಬಾಂಬ್ ಅನ್ನು ಬಾಂಬ್ ನಿಷ್ಕ್ರಿಯ ತಂಡವು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.