ADVERTISEMENT

ಮಣಿಪುರ: ನಿಷೇಧಿತ ಸಂಘಟನೆಗಳ ಮೂವರು ಉಗ್ರರ ಬಂಧನ, ಶಸ್ತ್ರಾಸ್ತ್ರ ವಶ

ಪಿಟಿಐ
Published 3 ಜುಲೈ 2025, 5:31 IST
Last Updated 3 ಜುಲೈ 2025, 5:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಇಂಫಾಲ್: ಮಣಿಪುರದ ಇಂಫಾಲ್ ಕಣಿವೆ ಜಿಲ್ಲೆಗಳಲ್ಲಿ ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬಿಷ್ಣುಪುರ ಜಿಲ್ಲೆಯ ಮೈತ್ರಮ್ ಪ್ರದೇಶದಲ್ಲಿ ನಿಷೇಧಿತ ಪ್ರೆಪಾಕ್‌ ಸಂಘಟನೆಯ ಸದಸ್ಯ ಓಯಿನಮ್ ಹೇಮಂಜಿತ್ ಸಿಂಗ್‌ನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ADVERTISEMENT

ಇಂಫಾಲ್ ಪೂರ್ವ ಜಿಲ್ಲೆಯ ಸೆಕ್ಮೈಜಿನ್ ಮಾನಿಂಗ್ ಲೈಕೈ ಪ್ರದೇಶದಲ್ಲಿ ನಿಷೇಧಿತ ಕಾಂಗ್ಲಿಪಾಕ್‌ ಕಮ್ಯುನಿಸ್ಟ್‌ ಪಕ್ಷದ (ಪಿಡಬ್ಲ್ಯುಜಿ) ಸದಸ್ಯ ಓಯಿನಮ್ ಟೊಂಬಾ ಸಿಂಗ್‌ನನ್ನು (57) ಭದ್ರತಾ ಪಡೆಗಳು ಬಂಧಿಸಿವೆ. ಈತನ ಮೇಲೆ ಕಾಕ್ಚಿಂಗ್ ಮತ್ತು ತೌಬಲ್ ಜಿಲ್ಲೆಗಳ ವಿವಿಧ ಪೆಟ್ರೋಲ್ ಪಂಪ್‌ಗಳಲ್ಲಿ ಸುಲಿಗೆ ಮಾಡಿದ ಆರೋಪವಿದೆ.

ಕಾಕ್ಚಿಂಗ್ ಜಿಲ್ಲೆಯಲ್ಲಿ ಕಾಂಗ್ಲಿಪಾಕ್‌ ಕಮ್ಯುನಿಸ್ಟ್‌ ಪಕ್ಷದ (ಪಿಡಬ್ಲ್ಯುಜಿ) ಸದಸ್ಯ ಲೌರೆಂಬಮ್ ಸುರೇಶ್‌ನನ್ನು (47) ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಸ್ತ್ರಾಸ್ತ್ರ ವಶ: ಇಂಫಾಲ್‌ ಪೂರ್ವ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.