ಹೋರಾಟಗಾರ ಮನೋಜ್ ಜರಾಂಗೆ ಅವರು ಮುಂಬೈನ ಆಜಾದ್ ಮೈದಾನದಲ್ಲಿ ಶುಕ್ರವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು
ಪಿಟಿಐ ಚಿತ್ರ
ಮುಂಬೈ: ಮರಾಠ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಹೋರಾಟಗಾರ ಮನೋಜ್ ಜರಾಂಗೆ ಅವರು ಮುಂಬೈನ ಆಜಾದ್ ಮೈದಾನದಲ್ಲಿ ಶುಕ್ರವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
‘ಸಮುದಾಯದ ಬೇಡಿಕೆಗಳು ಈಡೇರುವವರೆಗೆ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ. ಗುಂಡಿಟ್ಟು ಕೊಂದರೂ ನಾನು ಹಿಂದೆ ಸರಿಯುವುದಿಲ್ಲ’ ಎಂದು ಜರಾಂಗೆ ಹೇಳಿದ್ದಾರೆ.
ಜರಾಂಗೆ ಜೊತೆ ಮಾತನಾಡಲು ಸಿದ್ಧ ಎಂದು ಸರ್ಕಾರ ತಿಳಿಸಿದೆ. ಮರಾಠವಾಡ ಪ್ರದೇಶದ ಸಂಸದರು ಮತ್ತು ಶಾಸಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಒಂದು ದಿನ ಪ್ರತಿಭಟನೆ ನಡೆಸಲು ಮಾತ್ರ ಪೊಲೀಸರು ಅನುಮತಿ ನೀಡಿರುವ ಕುರಿತು ಆಕ್ರೋಶ ವ್ಯಕ್ತಪಡಿದ ಜರಾಂಗೆ ಅವರು, ‘ಮುಂಬೈಗೆ ಬರಲು ನಿರ್ಧರಿಸಿದ್ದೇವೆ, ಬಂದಿದ್ದೇವೆ. ಸರ್ಕಾರ ಮತ್ತು ನ್ಯಾಯಾಲಯ ಅನುಮತಿ ನೀಡುತ್ತದೆ ಎಂಬ ನಂಬಿಕೆ ಇದೆ. ನಾವು ಇನ್ನೊಂದು ಅರ್ಜಿ ಸಲ್ಲಿಸುತ್ತೇವೆ’ ಎಂದು ಹೇಳಿದರು.
ಅಂತರವಾಲಿ ಸಾರಥಿ ಗ್ರಾಮದಿಂದ ಜರಾಂಗೆ ಮತ್ತು ಬೆಂಬಲಿಗರು ನೂರಾರು ವಾಹನಗಳಲ್ಲಿ ಮುಂಬೈಗೆ ಬಂದರು. ಅವರನ್ನು ನೂರಾರು ಜನ ಸ್ವಾಗತಿಸಿದರು.
ಹೋರಾಟಗಾರ ಮನೋಜ್ ಜರಾಂಗೆ ಆಗ್ರಹಿಸಿ ಬೆಂಬಲಿಗರು
ಮರಾಠ ಸಮುದಾಯದ ಬೇಡಿಕೆಗಳ ಕುರಿತು ಸಚಿವ ಸಂಪುಟ ಉಪ ಸಮಿತಿಯು ಚರ್ಚೆ ನಡೆಸುತ್ತಿದೆ. ಸಾಂವಿಧಾನಿ ಚೌಕಟ್ಟಿನಲ್ಲಿ ಪರಿಹಾರ ನೀಡುತ್ತೇವೆದೇವೇಂದ್ರ ಫಡಣವೀಸ್ ಮುಖ್ಯಮಂತ್ರಿ ಮಹಾರಾಷ್ಟ್ರ
ಪ್ರತಿಭಟನಾಕಾರರು ಭಯೋತ್ಪಾದಕರಲ್ಲ. ಮರಾಠ ಸಮುದಾಯಕ್ಕೆ ನ್ಯಾಯ ಕೊಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆಉದ್ಧವ್ ಠಾಕ್ರೆ ಶಿವಸೇನಾ ಮುಖ್ಯಸ್ಥ
ಮೀಸಲಾತಿ ವಿಚಾರದಲ್ಲಿ ಸರ್ಕಾರವು ಮರಾಠ ಸಮುದಾಯಕ್ಕೆ ಅನ್ಯಾಯ ಮಾಡುವುದಿಲ್ಲ. ಅದರೆ ಇತರ ಸಮುದಾಯಗಳಿಗೂ ಅನ್ಯಾಯ ಮಾಡಲಾಗುವುದಿಲ್ಲಏಕನಾಥ ಶಿಂದೆ ಉಪ ಮುಖ್ಯಮಂತ್ರಿ ಮಹಾರಾಷ್ಟ್ರ
ಸಂಚಾರ ಸೇವೆಯಲ್ಲಿ ವ್ಯತ್ಯಯ:
ಮರಾಠ ಮೀಸಲಾತಿ ಹೋರಾಟಕ್ಕಾಗಿ ನೂರಾರು ಜನರು ಮುಂಬೈಗೆ ಬಂದಿದ್ದರಿಂದ ಛತ್ರಪತಿ ಶಿವಾಜಿ ರೈಲು ನಿಲ್ದಾಣದಲ್ಲಿ ಜನದಟ್ಟಣೆ ವಿಪರಿತವಾಗಿತ್ತು. ಅಗತ್ಯವಿದ್ದರೆ ಮಾತ್ರ ಜನರು ರೈಲು ನಿಲ್ದಾಣದತ್ತ ತೆರಳುವಂತೆ ಕೇಂದ್ರ ರೈಲ್ವೆಯು ಮನವಿ ಮಾಡಿದೆ. ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು ಮತ್ತು ನಗರ ಸಾರಿಗೆ ಸೇವೆಯಲ್ಲಿಯೂ ವ್ಯತ್ಯಯವಾಗಿತ್ತು. ‘ಮುಂಬೈನ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟುಮಾಡಬೇಡಿ’ ಎಂದು ಜರಾಂಗೆ ಅವರು ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.