ADVERTISEMENT

ಮರಾಠ ಮೀಸಲಾತಿ ಹೋರಾಟ: ಬೇಡಿಕೆ ಈಡೇರುವವರೆಗೂ ಉಪವಾಸ ಎಂದ ಜರಾಂಗೆ

ಪಿಟಿಐ
Published 29 ಆಗಸ್ಟ್ 2025, 5:37 IST
Last Updated 29 ಆಗಸ್ಟ್ 2025, 5:37 IST
<div class="paragraphs"><p>ಮರಾಠ ಮೀಸಲಾತಿಗಾಗಿ ಉಪವಾಸ ಸತ್ಯಾಗ್ರಹ  ಆರಂಭಿಸಲು ಮುಂಬೈಗೆ ಬಂದ ಮನೋಜ ಜರಾಂಗೆ ಅವರಿಗೆ ಬೆಂಬಲಿಗರ ಸ್ವಾಗತ</p></div>

ಮರಾಠ ಮೀಸಲಾತಿಗಾಗಿ ಉಪವಾಸ ಸತ್ಯಾಗ್ರಹ ಆರಂಭಿಸಲು ಮುಂಬೈಗೆ ಬಂದ ಮನೋಜ ಜರಾಂಗೆ ಅವರಿಗೆ ಬೆಂಬಲಿಗರ ಸ್ವಾಗತ

   

ಪಿಟಿಐ ಚಿತ್ರ

ಮುಂಬೈ: ಮರಾಠ ಸಮುದಾಯದ ಮೀಸಲಾತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹವನ್ನು ಮನೋಜ್ ಜರಾಂಗೆ ಶುಕ್ರವಾರ ಆರಂಭಿಸಿದ್ದಾರೆ. 

ADVERTISEMENT

ಸಮುದಾಯದ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು ಎಂದು ಜರಾಂಗೆ ಎಚ್ಚರಿಕೆ ನೀಡಿದ್ದಾರೆ.

ಮುಂಬೈನ ಆಜಾದ್ ಮೈದಾನದಲ್ಲಿ ಸತ್ಯಾಗ್ರಹವನ್ನು ಅವರು ಆರಂಭಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಹೋರಾಟಗಾರರು ಅತ್ತ ಧಾವಿಸುತ್ತಿದ್ದಾರೆ. ಉಪನಗರ ರೈಲು ಮತ್ತು ಮುಂಬೈ ಲೋಕಲ್ಸ್‌ ಮೂಲಕ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನತ್ತು ಬರುತ್ತಿದ್ದಾರೆ ಎಂದು ವರದಿಯಾಗಿದೆ. ಪೇಟ ಧರಿಸಿ, ಕೈಯಲ್ಲಿ ಕೇಸರಿ ಧ್ವಜ ಹಿಡಿದು ಬರುತ್ತಿದ್ದವರಿಂದಾಗಿ ಟರ್ಮಿನಸ್‌ನಲ್ಲಿ ಜನಜಂಗುಳಿ ಏರ್ಪಟ್ಟಿತ್ತು.

ಅಹಿತಕರ ಘಟನೆ ನಡೆಯದಂತೆ ಪೊಲೀಸ್‌, ರೈಲ್ವೆ ಸುರಕ್ಷಾ ದಳ ಸಿಬ್ಬಂದಿ ಭದ್ರತೆ ಕೈಗೊಂಡಿದ್ದಾರೆ. ಗಣೇಶ ಹಬ್ಬದ ವಾತಾವರಣವೂ ಇರುವುದರಿಂದ ಹೆಚ್ಚುವರಿಯಾಗಿ ಮಹಾರಾಷ್ಟ್ರ ಭದ್ರತಾ ದಳವನ್ನೂ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.