ADVERTISEMENT

ಬೇಡಿಕೆ ಈಡೇರದ ಹೊರತು ಮುಂಬೈ ಬಿಟ್ಟು ಕದಲುವುದಿಲ್ಲ: ಮನೋಜ್ ಜಾರಂಗೆ

ಪಿಟಿಐ
Published 31 ಆಗಸ್ಟ್ 2025, 14:26 IST
Last Updated 31 ಆಗಸ್ಟ್ 2025, 14:26 IST
   

ಮುಂಬೈ: ‘ಮರಾಠ ಮೀಸಲಾತಿ ಬೇಡಿಕೆ ಈಡೇರುವವರೆಗೆ ಮುಂಬೈ ಬಿಟ್ಟು ಕದಲುವುದಿಲ್ಲ’ ಎಂದು ಹೋರಾಟಗಾರ ಮನೋಜ್ ಜಾರಂಗೆ ಹೇಳಿದ್ದಾರೆ. ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹವು ಮೂರನೆಯ ದಿನವಾದ ಭಾನುವಾರವೂ ಮುಂದುವರಿಯಿತು.

‘ನಮ್ಮ ಬೇಡಿಕೆ ಸಾಂವಿಧಾನಿಕವಾಗಿ ಮಾನ್ಯವಾಗಿದೆ. ಕುಣಬಿಗಳು ಮತ್ತು ಮರಾಠರು ಒಂದೇ ಜಾತಿಯವರು ಎಂಬ ದಾಖಲೆ ಸರ್ಕಾರದ ಬಳಿ ಇದೆ’ ಎಂದು ಜಾರಂಗೆ ಹೇಳಿದ್ದಾರೆ. 

ಉಪವಾಸ ಸತ್ಯಾಗ್ರಹ ಬೆಂಬಲಿಸಿ ಛತ್ರಪತಿ ಶಿವಾಜಿ ಮಹಾರಾಜ್‌ ನಿಲ್ದಾಣದ ಬಳಿ ಅಪಾರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಮುಂಬೈ ಪೊಲೀಸರು ‘ಎಕ್ಸ್‌’ ಖಾತೆಯ ಮೂಲಕ ಮನವಿ ಮಾಡಿದರು. 

ADVERTISEMENT

ದಕ್ಷಿಣ ಮುಂಬೈನ ಆಜಾದ್‌ ಮೈದಾನದಲ್ಲಿ ಆ.29ರಿಂದ ಜಾರಂಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.