ADVERTISEMENT

76th Republic Day: ಪರೇಡ್‌ನಲ್ಲಿ ಇಂಡೋನೇಷ್ಯಾ ಸೇನಾ ತಂಡ ಭಾಗಿ

ಪಿಟಿಐ
Published 21 ಜನವರಿ 2025, 4:16 IST
Last Updated 21 ಜನವರಿ 2025, 4:16 IST
<div class="paragraphs"><p>ಗಣರಾಜ್ಯೋತ್ಸವ ಮೆರವಣಿಗೆ&nbsp; (ಸಾಂದರ್ಭಿಕ ಚಿತ್ರ)</p></div>

ಗಣರಾಜ್ಯೋತ್ಸವ ಮೆರವಣಿಗೆ  (ಸಾಂದರ್ಭಿಕ ಚಿತ್ರ)

   

ನವದೆಹಲಿ: 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ತವ್ಯ ಪಥದಲ್ಲಿ ನಡೆಯಲಿರುವ ಪರೇಡ್‌ನಲ್ಲಿ ಇಂಡೋನೇಷ್ಯಾದ ಸೇನೆ ಮತ್ತು ಬ್ಯಾಂಡ್‌ ತಂಡ ಭಾಗವಹಿಸಲಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.

ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ADVERTISEMENT

ಈ ಬಾರಿ ಕರ್ತವ್ಯ ಪಥದಲ್ಲಿ ನಡೆಯುವ ಮೆರವಣಿಗೆಯಲ್ಲಿ 300 ಸಾಂಸ್ಕೃತಿಕ ಕಲಾವಿದರು ದೇಶದ ವಿವಿಧ ಭಾಗಗಳನ್ನು ಪ್ರತಿನಿಧಿಸುವ ಸಂಗೀತ ವಾದ್ಯಗಳ ಮೂಲಕ ‘ಸಾರೆ ಜಹಾನ್ ಸೆ ಅಚ್ಛಾ’ ನುಡಿಸಲಿದ್ದಾರೆ.  ಶೆಹನಾಯಿ, ಸುಂದರಿ, ನಾದಸ್ವರಂ, ಬೀನ್, ಮಶಾಕ್ ಬೀನ್, ಕೊಳಲು, ಕರಡಿ ಮಜಲು, ಮೊಹುರಿ, ಶಂಖ, ತುಟಾರಿ, ಮತ್ತು ಧೋಲ್ ಸೇರಿ ಹಲವು ವಾದ್ಯಗಳ ಮೂಲಕ ಗೀತೆ ಮೊಳಗಲಿದೆ ಎಂದು ಸಚಿವಾಲಯ ಹೇಳಿದೆ.

ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಂಡೋನೇಷ್ಯಾದ 160 ಸದಸ್ಯರ ಸೇನಾ ತಂಡ ಮತ್ತು 190 ಸದಸ್ಯರ ಬ್ಯಾಂಡ್ ತಂಡ’ ಜನವರಿ 26 ರಂದು ಕರ್ತವ್ಯ ಪಥದಲ್ಲಿ ನಡೆಯುವ ಪರೇಡ್‌ನಲ್ಲಿ ಭಾಗವಹಿಸಲಿದ್ದು, ಭಾರತೀಯ ಸಶಸ್ತ್ರ ಪಡೆಯ ತಂಡಗಳು ಭಾಗವಹಿಸಲಿವೆ’ ಎಂದರು.

ಈ ವರ್ಷ, 31 ಸ್ಥಬ್ದಚಿತ್ರಗಳು ಮೆರವಣಿಗೆ ನಡೆಯಲಿವೆ. ಇದರಲ್ಲಿ 16 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು 15 ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳು ಪಾಲ್ಗೊಳ್ಳಲಿದ್ದು, ‘ಸ್ವರ್ಣಿಮ್ ಭಾರತ್: ವಿರಾಸತ್ ಔರ್ ವಿಕಾಸ್’ ಥೀಮ್ ಅನ್ನು ಪ್ರದರ್ಶಿಸಲಿವೆ ಎಂದು ಮಾಹಿತಿ ನೀಡಿದರು.

ರಾಷ್ಟ್ರಗೀತೆಯ ನಂತರ, ಭಾರತೀಯ ಸಂವಿಧಾನದ 75 ನೇ ವರ್ಷದ ಅಧಿಕೃತ ಲಾಂಛನದ ಬ್ಯಾನರ್‌ಗಳನ್ನು ಹೊಂದಿರುವ ಬಲೂನ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಕಾರ್ಯಕ್ರಮ 47 ವಿಮಾನಗಳ ಫ್ಲೈಪಾಸ್ಟ್‌ನೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಗಣರಾಜ್ಯ ದಿನವು ಸಂವಿಧಾನದ 75 ವರ್ಷಾಚರಣೆಯನ್ನು ಜಾರಿಗೆ ತರುತ್ತದೆ ಎಂದೂ ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.