
ವಶಪಡಿಸಿಕೊಂಡಿರುವ ಮಾದಕವಸ್ತು
ನವದೆಹಲಿ: ಮಾದಕವಸ್ತುಗಳ ನಿಯಂತ್ರಣ ದಳ (ಎನ್‌ಸಿಬಿ) ಮತ್ತು ದೆಹಲಿ ಪೊಲೀಸರು ನಡೆಸಿದ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ 328 ಕೆ.ಜಿ ತೂಕದಷ್ಟು ಮೆಥಾಂಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾದಕ ವಸ್ತುವಿನ ಮೌಲ್ಯ ₹262 ಕೋಟಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನಮ್ಮ ಸರ್ಕಾರವು ಅತಿವೇಗವಾಗಿ ಮಾದಕವಸ್ತು ಜಾಲವನ್ನು ಭೇದಿಸುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ತನಿಖಾ ತಂಡ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ₹262 ಕೋಟಿ ಮೌಲ್ಯದ 328 ಕೆ.ಜಿ ಮೆಥಾಂಫೆಟಮೈನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಇಬ್ಬರ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘ಪ್ರಧಾನಿ ಮೋದಿ ಅವರ ಮಾದಕವಸ್ತು ಮುಕ್ತ ಭಾರತಕ್ಕಾಗಿ ದೃಷ್ಟಿಕೋನವನ್ನು ಸಾಧಿಸಲು ಈ ಕಾರ್ಯಾಚರಣೆಯು ಬಹು-ಸಂಸ್ಥೆಗಳ ಸಮನ್ವಯದ ಅದ್ಭುತ ಉದಾಹರಣೆಯಾಗಿದೆ. ಎನ್‌ಸಿಬಿ ಮತ್ತು ದೆಹಲಿ ಪೊಲೀಸರ ಜಂಟಿ ತಂಡಕ್ಕೆ ಅಭಿನಂದನೆಗಳು’ ಎಂದು ಶಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.