ADVERTISEMENT

Video | ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಪೂಜೆ ಸಲ್ಲಿಸಿದ ಮಾರಿಷಸ್‌ ಪ್ರಧಾನಿ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2023, 13:50 IST
Last Updated 11 ಸೆಪ್ಟೆಂಬರ್ 2023, 13:50 IST
<div class="paragraphs"><p>ವಾರಣಸಿಯ ದಶಾಶ್ವಮೇಧ&nbsp;ಘಾಟ್‌ನಲ್ಲಿ&nbsp;ಪೂಜೆ ಸಲ್ಲಿಸಿದ&nbsp;ಪ್ರಧಾನಿ ಪ್ರವಿಂದ್‌ ಜುಗ್‌ನೌತ್‌– ಪಿಟಿಐ ಚಿತ್ರ</p></div>

ವಾರಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಪ್ರವಿಂದ್‌ ಜುಗ್‌ನೌತ್‌– ಪಿಟಿಐ ಚಿತ್ರ

   

ವಾರಾಣಸಿ(ಉತ್ತರ ಪ್ರದೇಶ):  ಜಿ 20 ಸಭೆಯ ಮುಗಿಸಿದ ಬಳಿ ಮಾರಿಷಸ್‌ನ ಪ್ರಧಾನಿ ಪ್ರವಿಂದ್‌ ಜುಗ್‌ನೌತ್‌ ಅವರು ಉತ್ತರ ಪ್ರದೇಶದ ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಜುಗ್‌ನೌತ್‌ ಪೂಜೆ ಸಲ್ಲಿಸಿದ್ದಾರೆ.

ದಶಾಶ್ವಮೇಧ ಘಾಟ್ ವಾರಾಣಸಿಯ ಪ್ರಮುಖ ಘಾಟ್‌ಗಳಲ್ಲಿ ಒಂದಾಗಿದೆ. ಇದು ಗಂಗಾನದಿಯ ದಡದಲ್ಲಿದೆ ಹಾಗೂ ವಿಶ್ವನಾಥ ದೇವಾಲಯಕ್ಕೆ ಹತ್ತಿರದಲ್ಲಿದೆ. 

ADVERTISEMENT

ಈ ಕುರಿತು ಎಎನ್‌ಐ ಸಂಸ್ಥೆ ವಿಡಿಯೊ ಹಂಚಿಕೊಂಡಿದೆ. ವಿಡಿಯೊದಲ್ಲಿ ಜುಗ್‌ನೌತ್‌ ಮತ್ತು ಅರ್ಚಕರ ಗುಂಪು ದೋಣಿಯಲ್ಲಿ ಕುಳಿತು ಘಾಟ್‌ನಲ್ಲಿ ಪೂಜೆ ಸಲ್ಲಿಸುವ ದೃಶ್ಯಗಳಿವೆ. ವಿಶೇಷವಾಗಿ ಈ ಘಾಟ್‌ನಲ್ಲಿ ಶಿವನಿಗೆ ಮತ್ತು ಗಂಗಾನದಿಗೆ ಪೂಜೆ ಮಾಡಲಾಗುತ್ತದೆ.

ಜುಗ್‌ನೌತ್‌ ಅವರು ದೆಹಲಿಯಲ್ಲಿ ಸೆ.9,10ರಂದು ನಡೆದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಶುಕ್ರವಾರ (ಸೆ.8ರಂದು)ದೆಹಲಿಗೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.