ADVERTISEMENT

ಉಕ್ರೇನ್‌ನಿಂದ ಭಾರತೀಯರ ಸ್ಥಳಾಂತರ ಕಾರ್ಯಾಚರಣೆಗೆ ನೆರವಾಗಲು ಟ್ವಿಟರ್ ಹ್ಯಾಂಡಲ್‌

ಪಿಟಿಐ
Published 28 ಫೆಬ್ರುವರಿ 2022, 1:17 IST
Last Updated 28 ಫೆಬ್ರುವರಿ 2022, 1:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರ ಸ್ಥಳಾಂತರ ಕಾರ್ಯಾಚರಣೆಗೆ ನೆರವಾಗಲೆಂದೇ ವಿದೇಶಾಂಗ ಸಚಿವಾಲಯ ‘ಆಪ್‌ಗಂಗಾ ಹೆಲ್ಪ್‌ಲೈನ್ (@opganga)’ ಹೆಸರಿನ ಟ್ವಿಟರ್‌ ಹ್ಯಾಂಡಲ್ ಅನ್ನು ತೆರೆದಿದೆ.

‘ಆಪರೇಷನ್ ಗಂಗಾ’ ಎಂಬ ಹೆಸರಿನ ಕಾರ್ಯಾಚರಣೆ ಮೂಲಕ ಉಕ್ರೇನ್‌ನಿಂದ ಭಾರತೀಯರ ಸ್ಥಳಾಂತರ ನಡೆಯುತ್ತಿದೆ.

ಪೋಲೆಂಡ್, ರೊಮೇನಿಯಾ, ಹಂಗೇರಿ, ಸ್ಲೊವಾಕಿಯಾ ಗಡಿಗಳಲ್ಲಿ ಉಕ್ರೇನ್‌ನಿಂದ ಬರುವ ಭಾರತೀಯರಿಗೆ ನೆರವಾಗಲೆಂದೇ ಕೇಂದ್ರಗಳನ್ನು ತೆರೆಯಲಾಗಿದ್ದು, ಇವು ನಿರಂತರ ಕಾರ್ಯಾಚರಣೆ ನಡೆಸುತ್ತಿವೆ.

ADVERTISEMENT

ಪೋಲೆಂಡ್‌ನಲ್ಲಿರುವ ಸಹಾಯವಾಣಿ ಸಂಖ್ಯೆಗಳು ಹೀಗಿವೆ; +48225400000, +48795850877 ಮತ್ತು +48792712511. ಸಹಾಯ ಬೇಕಿದ್ದವರು ಇ–ಮೇಲ್ ವಿಳಾಸ controlroominwarsaw@gmail.com ಇದಕ್ಕೂ ಸಂದೇಶ ಕಳುಹಿಸಬಹುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ರೊಮೇನಿಯಾದಲ್ಲಿರುವ ಸಹಾಯವಾಣಿ ಕೇಂದ್ರದ ಸಂಪರ್ಕ ಸಂಖ್ಯೆಗಳು ಹೀಗಿವೆ; +40732124309, +40771632567, +40745161631 ಮತ್ತು +40741528123. ಇ–ಮೇಲ್ ವಿಳಾಸ – controlroombucharest@gmail.com.

ಹಂಗೇರಿಯಲ್ಲಿರುವ ಸಹಾಯವಾಣಿ ಕೇಂದ್ರವನ್ನು +36 308517373, +36 13257742 ಮತ್ತು +36 13257743 ಈ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು. +36 308517373 ಸಂಖ್ಯೆಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಬಹುದು ಎಂದೂ ಸಚಿವಾಲಯ ತಿಳಿಸಿದೆ.

ಸ್ಲೊವಾಕಿಯಾದಲ್ಲಿರುವ ಕೇಂದ್ರದ ಸಹಾಯವಾಣಿ ಸಂಖ್ಯೆಗಳು ಮತ್ತು ಇ–ಮೇಲ್ ವಿಳಾಸ ಹೀಗಿದೆ; +421 252631377, +421 252962916 ಹಾಗೂ +421 951697560. ಇ–ಮೇಲ್ – hoc.bratislava@mea.gov.in.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.