ADVERTISEMENT

ದೈನಿಕ್‌ ಭಾಸ್ಕರ್‌ ಮಾಧ್ಯಮ ಸಮೂಹದ ಮೇಲೆ ಐಟಿ ದಾಳಿ

ಪಿಟಿಐ
Published 22 ಜುಲೈ 2021, 5:19 IST
Last Updated 22 ಜುಲೈ 2021, 5:19 IST
ಆದಾಯ ತೆರಿಗೆ ಇಲಾಖೆ–ಪ್ರಾತಿನಿಧಿಕ ಚಿತ್ರ
ಆದಾಯ ತೆರಿಗೆ ಇಲಾಖೆ–ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೈನಿಕ್‌ ಭಾಸ್ಕರ್‌ ಮಾಧ್ಯಮ ಸಮೂಹದ ಹಲವು ಕಚೇರಿಗಳ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚಿಸಿರುವ ಆರೋಪಗಳಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ಭೋಪಾಲ್‌, ಜೈಪುರ, ಅಹಮದಾಬಾದ್‌ ಸೇರಿ ದೇಶದ ಹಲವು ನಗರಗಳಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

ದೇಶದ ಹಲವು ರಾಜ್ಯಗಳಲ್ಲಿ ಪತ್ರಿಕೆಯ ಪ್ರಸಾರ ಹೊಂದಿರುವ ಹಿಂದಿಯ ಪ್ರಮುಖ ಮಾಧ್ಯಮ ಸಮೂಹ ದೈನಿಕ್‌ ಭಾಸ್ಕರ್‌. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಅಥವಾ ತೆರಿಗೆ ಇಲಾಖೆಯಿಂದ ದಾಳಿ ಮಾಡಿರುವ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬಂದಿಲ್ಲ.

ADVERTISEMENT

ಕಾಂಗ್ರೆಸ್‌ ಮುಖಂಡ ಮತ್ತು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಟ್ವಿಟರ್‌ನಲ್ಲಿ ಐಟಿ ದಾಳಿಯ ಕುರಿತು ಪ್ರಕಟಿಸಿದ್ದಾರೆ. ಭೋಪಾಲ್‌ನ ಪ್ರೆಸ್‌ ಕಾಂಪ್ಲೆಕ್ಸ್‌ನಲ್ಲಿರುವ ಕಚೇರಿಯ ಸೇರಿದಂತೆ ತೆರಿಗೆ ಇಲಾಖೆ ಅಧಿಕಾರಿಗಳು ಮಾಧ್ಯಮ ಸಮೂಹದ ಆರು ಕಚೇರಿಗಳಿಗೆ ತೆರಿಗೆ ಅಧಿಕಾರಿಗಳು ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.