ADVERTISEMENT

ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಲಸಿಕೆ ಹಂಚಿಕೆ – ಮಾಧ್ಯಮ ವರದಿ ನಿಖರವಲ್ಲ: ಕೇಂದ್ರ

ಪಿಟಿಐ
Published 5 ಜೂನ್ 2021, 1:24 IST
Last Updated 5 ಜೂನ್ 2021, 1:24 IST
ಸಾಂದರ್ಭಿಕ ಚಿತ್ರ – ಎಎಫ್‌ಪಿ
ಸಾಂದರ್ಭಿಕ ಚಿತ್ರ – ಎಎಫ್‌ಪಿ   

ನವದೆಹಲಿ: ಖಾಸಗಿ ಆಸ್ಪತ್ರೆಗಳು ಮೇ ತಿಂಗಳಲ್ಲಿ 1.29 ಕೋಟಿ ಡೋಸ್ ಕೋವಿಡ್ ಲಸಿಕೆ ಸಂಗ್ರಹಿಸಿದ್ದು, ಅದರಲ್ಲಿ 22 ಲಕ್ಷ ಡೋಸ್‌ ಅನ್ನು ನೀಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಜನ 16ರ ದತ್ತಾಂಶವನ್ನು ಮೇ 1ರ ನೀತಿಯನ್ನು ಆಧಾರವಾಗಿಟ್ಟುಕೊಂಡು ತುಲನೆ ಮಾಡುವುದರಿಂದ ದಾರಿತಪ್ಪಿಸಿದಂತಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಶೇ 25ರಷ್ಟು ಡೋಸ್‌ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಶೇ 7.5 ಡೋಸ್ ಲಸಿಕೆ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗಿದೆ. ಮಾಧ್ಯಮ ವರದಿಗಳು ನಿಖರವಾಗಿಲ್ಲ ಮತ್ತು ಲಭ್ಯವಿರುವ ದತ್ತಾಂಶದ ಜತೆ ತುಲನೆಯಾಗುತ್ತಿಲ್ಲ ಎಂದು ಸಚಿವಾಲಯ ತಿಳಿಸಿದೆ.

ADVERTISEMENT

‘ಖಾಸಗಿ ವಲಯಕ್ಕೆ ನೀಡಿರುವುದರಲ್ಲಿ ವ್ಯತ್ಯಾಸವಿದೆ ಎಂದು ಸೂಚಿಸುವುದಕ್ಕಾಗಿ ಅವರು (ಮಾಧ್ಯಮಗಳು) ಹೋಲಿಕೆ ಮಾಡಬಾರದಂತಹ ಎರಡು ದತ್ತಾಂಶಗಳನ್ನು ತುಲನೆ ಮಾಡುತ್ತಿದ್ದಾರೆ’ ಎಂದು ಸಚಿವಾಲಯ ಹೇಳಿದೆ.

ಮೇ ತಿಂಗಳಲ್ಲಿ ಲಸಿಕೆ ನೀಡಿಕೆ ಸಂಬಂಧಿತ ನೀತಿ ರೂಪಿಸಿದಾಗ ಒಟ್ಟು 7.4 ಕೋಟಿ ಡೋಸ್ ಲಸಿಕೆ ಲಭ್ಯವಿತ್ತು. ಈ ಪೈಕಿ 1.85 ಕೋಟಿ ಡೋಸ್‌ಗಳನ್ನು ಖಾಸಗಿ ಆಸ್ಪತ್ರೆಗಳಿಗಾಗಿ ಮೀಸಲಿಡಲಾಗಿತ್ತು. ಅವುಗಳು 1.29 ಕೋಟಿ ಡೋಸ್ ಖರೀದಿಸಿವೆ. ಆ ಪೈಕಿ 22 ಲಕ್ಷ ಡೋಸ್‌ ಲಸಿಕೆಯನ್ನು ಜನರಿಗೆ ನೀಡಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.