ADVERTISEMENT

ವೈಭವೀಕರಣ ಬೇಡ: ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್‌ ಕಿವಿಮಾತು

ಪಿಟಿಐ
Published 13 ಡಿಸೆಂಬರ್ 2024, 16:08 IST
Last Updated 13 ಡಿಸೆಂಬರ್ 2024, 16:08 IST
<div class="paragraphs"><p>ಸುಪ್ರೀಂ ಕೋರ್ಟ್‌&nbsp;</p></div>

ಸುಪ್ರೀಂ ಕೋರ್ಟ್‌ 

   

ನವದೆಹಲಿ: ಅರ್ಜಿಗಳ ವಿಚಾರಣೆಯನ್ನು ಮಾಧ್ಯಮಗಳು ವೈಭವೀಕರಿಸಬಾರದು ಹಾಗೂ ತಪ್ಪು ನಿರೂಪಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

ದೇಶದ ಹಲವು ದೇವಸ್ಥಾನಗಳಲ್ಲಿ ‘ವಿಐಪಿ ದರ್ಶನ’ಕ್ಕಾಗಿ ಹೆಚ್ಚುವರಿ ಶುಲ್ಕ ವಿಧಿಸುವ ಪದ್ಧತಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್‌ ವಿಚಾರಣೆಗೆ ಸಂಬಂಧಿಸಿ ಕೆಲ ಮಾಧ್ಯಮಗಳು ಪ್ರಕಟಿಸಿದ/ಬಿತ್ತರಿಸಿದ ಸುದ್ದಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಈ ಮಾತು ಹೇಳಿದೆ.

ADVERTISEMENT

ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಸಂಜೀವ್‌ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್‌ ಅವರು ಇದ್ದ ಪೀಠ, ‘ಪಿಐಎಲ್‌ ವಿಚಾರಣೆ ವೇಳೆಯ ಕೋರ್ಟ್‌ ಕಲಾಪ ಕುರಿತು ಸುದ್ದಿಯನ್ನು ಮಾಧ್ಯಮಗಳು ಸಂಪೂರ್ಣ ತಿರುಚಿವೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.