ADVERTISEMENT

Messi In India| ಹೈದರಾಬಾದ್‌ಗೆ ಆಗಮಿಸಿದ ಮೆಸ್ಸಿ: ಸ್ವಾಗತಿಸಿದ ಮುಖ್ಯಮಂತ್ರಿ

ಪಿಟಿಐ
Published 13 ಡಿಸೆಂಬರ್ 2025, 13:36 IST
Last Updated 13 ಡಿಸೆಂಬರ್ 2025, 13:36 IST
   

ಹೈದರಾಬಾದ್‌: ಭಾರತ ಪ್ರವಾಸದಲ್ಲಿರುವ ಸ್ಟಾರ್‌ ಫುಟ್‌ಬಾಲ್‌ ಆಟಗಾರ ಲಿಯೊನೆಲ್ ಮೆಸ್ಸಿ ಅವರು ಹೈದರಾಬಾದ್‌ಗೆ ಆಗಮಿಸಿದ್ದಾರೆ.

ಮೆಸ್ಸಿ ಅವರು ಮೂರು ದಿನಗಳ ಕಾಲ ಭಾರತದಲ್ಲಿ ‘ಗೋಟ್‌ ಇಂಡಿಯಾ ಟೂರ್‌’ ಮಾಡುತ್ತಿದ್ದಾರೆ. ಶನಿವಾರ(ಡಿ.13) ಬೆಳಿಗ್ಗೆ ಕೋಲ್ಕತ್ತಕ್ಕೆ ತೆರಳಿದ್ದ ಮೆಸ್ಸಿ, ಸಾಯಂಕಾಲ ಹೈದರಾಬಾದ್‌ಗೆ ಬಂದಿಳಿದಿದ್ದಾರೆ.

ಹೈದರಾಬಾದ್‌ಗೆ ಆಗಮಿಸಿದ ಲಿಯೊನೆಲ್ ಮೆಸ್ಸಿ ಅವರನ್ನು ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರು ಸ್ವಾಗತಿಸಿದ್ದಾರೆ.

ADVERTISEMENT

ಹೈದರಾಬಾದ್‌ನಲ್ಲಿ ಸಾಯಂಕಾಲ 7.50ಕ್ಕೆ ಆಯೋಜನೆಗೊಂಡಿರುವ ಪ್ರದರ್ಶನ ಪಂದ್ಯದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ನಂತರ ರೇವಂತ್‌ ರೆಡ್ಡಿ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮೆಸ್ಸಿಯನ್ನು ಭೇಟಿಯಾಗಲಿದ್ದಾರೆ.

ಕೋಲ್ಕತ್ತದ ಸಾಲ್ಟ್‌ ಲೇಕ್‌ ಮೈದಾನದಲ್ಲಿ ನಡೆದ ಕಾರ್ಯಕ್ರಮದಿಂದ ನಿಗದಿತ ಸಮಯಕ್ಕಿಂತ ಮುನ್ನವೇ ಮೆಸ್ಸಿ ನಿರ್ಗಮಿಸಿದ್ದರಿಂದ, ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಆಕ್ರೋಶದಿಂದ ಬಾಟಲ್ ಹಾಗೂ ಕುರ್ಚಿಗಳನ್ನು ಮೈದಾನದತ್ತ ಎಸೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.