ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ಆಗಸ್ಟ್ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಪಾನ್ ಮತ್ತು ಚೀನಾ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಬುಧವಾರ ತಿಳಿಸಿವೆ.
ಆಗಸ್ಟ್ 29ಕ್ಕೆ ಪ್ರವಾಸ ಆರಂಭಿಸಲಿದ್ದು,, ಮೊದಲು ಜಪಾನ್‌ಗೆ ಭೇಟಿ ನೀಡಿ, ಅಲ್ಲಿಯ ಪ್ರಧಾನಿಯೊಂದಿಗೆ ವಾರ್ಷಿಕ ಶೃಂಗಸಭೆಯಲ್ಲಿ ಮಾತುಕತೆ ನಡೆಸಲಿದ್ದಾರೆ.
ಆ.31ಕ್ಕೆ ಜಪಾನ್‌ನಿಂದ ಚೀನಾಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಅಲ್ಲಿ ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಮೋದಿ, ಚೀನಾಕ್ಕೆ ಭೇಟಿ ನೀಡಿದರೆ, ಅದು ಲಡಾಖ್ ಗಡಿ ಪರಿಸ್ಥಿತಿ ಸ್ಥಿರವಾದ ಬಳಿಕದ ಮೊದಲ ಭೇಟಿಯಾಗಲಿದೆ.
ಚೀನಾದಲ್ಲಿ ಎಸ್‌ಸಿಒ ಶೃಂಗವು ಆ.31ರಿಂದ ಸೆ.1ರವರೆಗೆ ನಡೆಯಲಿದೆ.
ಮೋದಿಯವರ ಜಪಾನ್, ಚೀನಾ ಪ್ರವಾಸದ ಕುರಿತು ಪ್ರಧಾನಿ ಕಚೇರಿ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.