ADVERTISEMENT

Mumbai Rains: ಹಳಿಗಳ ಮಧ್ಯೆ ಸಿಲುಕಿಕೊಂಡ ಮೋನೋ ರೈಲು; 782 ಪ್ರಯಾಣಿಕರ ರಕ್ಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಆಗಸ್ಟ್ 2025, 3:15 IST
Last Updated 20 ಆಗಸ್ಟ್ 2025, 3:15 IST
<div class="paragraphs"><p>ಮೋನೋ ರೈಲು</p></div>

ಮೋನೋ ರೈಲು

   

ಮುಂಬೈ: ಮುಂಬೈಯಲ್ಲಿ ಭಾರಿ ಮಳೆಯ ನಡುವೆ ಎಲೆವೇಟೆಡ್ ಹಳಿಗಳ ಮೇಲೆ ಎರಡು ಮೋನೋ ರೈಲುಗಳು ನಿಲ್ದಾಣಗಳ ನಡುವೆ ಸಿಲುಕಿಕೊಂಡಿದ್ದ ಘಟನೆ ನಡೆದಿತ್ತು. ಮಂಗಳವಾರ ಸಂಜೆ 6.16ರ ಹೊತ್ತಿಗೆ ಈ ಘಟನೆ ನಡೆದಿದ್ದು, ಕಿಕ್ಕಿರಿದು ತುಂಬಿಕೊಂಡಿದ್ದ ಮೋನೋ ರೈಲುಗಳಿಂದ 782 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿನಲ್ಲಿ ಉಸಿರಾಟದ ತೊಂದರೆ ಕಾಡಿತ್ತು ಎಂದು ಅನೇಕ ಮಂದಿ ಪ್ರಯಾಣಿಕರು ದೂರಿದ್ದಾರೆ. ಕೆಲವರಿಗೆ ಪ್ರಜ್ಞೆ ತಪ್ಪಿ ಹೋಗಿರುವ ಘಟನೆಯೂ ನಡೆದಿದೆ.

ADVERTISEMENT

ಒರ್ವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಮುಂಬೈಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಪನಗರದ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದರ ಪರಿಣಾಮ ಮೋನೋ ರೈಲಿನಲ್ಲಿ ಹಠಾತ್ ಜನದಟ್ಟಣೆ ನಿಭಾಯಿಸಲು ಸಾಧ್ಯವಾಗಲಿಲ್ಲ. ಈ ನಡುವೆ ವಿದ್ಯುತ್ ವ್ಯತ್ಯಯ ಉಂಟಾಯಿತು' ಎಂದು ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ತಿಳಿಸಿದೆ.

'ಮೈಸೂರು ಕಾಲನಿ ಹಾಗೂ ಭಕ್ತಿ ಪಾರ್ಕ್ ನಿಲ್ದಾಣಗಳ ನಡುವೆ ಸಿಲುಕಿಕೊಂಡಿದ್ದ ಮೋನೋ ರೈಲನ್ನು ಹಿಂದಕ್ಕೆ ತರಲು ಸಾಧ್ಯವಾಗದ ಕಾರಣ ಏಣಿಗಳನ್ನು ಬಳಸಿ 582 ಪ್ರಯಾಣಿಕರನ್ನು ರಕ್ಷಿಸಲಾಯಿತು. ಮತ್ತೊಂದು ಮೋನೋ ರೈಲನ್ನು ಹತ್ತಿರದ ನಿಲ್ದಾಣಕ್ಕೆ ಎಳೆದು ತರುವ ಮೂಲಕ 200 ಪ್ರಯಾಣಿಕರನ್ನು ರಕ್ಷಿಸಲಾಯಿತು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.

ಮೋನೋ ರೈಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.