ADVERTISEMENT

ಜಲಿಯನ್ ವಾಲಾಬಾಗ್‌ಗೆ ರಾಣಿ ಭೇಟಿ ಕ್ಷಮೆಗಿಂತಲೂ ಮಿಗಿಲು: ಸುಕುಮಾರ್ ಮುಖರ್ಜಿ

ಪಿಟಿಐ
Published 10 ಸೆಪ್ಟೆಂಬರ್ 2022, 4:02 IST
Last Updated 10 ಸೆಪ್ಟೆಂಬರ್ 2022, 4:02 IST
ರಾಣಿ 2ನೇ ಎಲಿಜಬೆತ್ ಅವರ ಗೌರವಾರ್ಥ ವೇಲ್ಸ್‌ನಲ್ಲಿ 96 ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ‘ಗನ್‌ ಸೆಲ್ಯೂಟ್‌’ ಸಲ್ಲಿಸಲಾಯಿತು – ಎಎಫ್‌ಪಿ ಚಿತ್ರ 
ರಾಣಿ 2ನೇ ಎಲಿಜಬೆತ್ ಅವರ ಗೌರವಾರ್ಥ ವೇಲ್ಸ್‌ನಲ್ಲಿ 96 ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ‘ಗನ್‌ ಸೆಲ್ಯೂಟ್‌’ ಸಲ್ಲಿಸಲಾಯಿತು – ಎಎಫ್‌ಪಿ ಚಿತ್ರ    

ಅಮೃತಸರ: ‘ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಸ್ಮಾರಕಕ್ಕೆ ರಾಣಿ 2ನೇಎಲಿಜಬೆತ್ ಅವರ ಭೇಟಿ, ಆ ಘಟನೆಗೆ ಕ್ಷಮೆ ಕೇಳುವುದಕ್ಕಿಂತಲೂ ಮಿಗಿಲಾದುದು’ ಎಂದು ಜಲಿಯನ್‌ ವಾಲಾಬಾಗ್‌ ಟ್ರಸ್ಟ್‌ ಕಾರ್ಯದರ್ಶಿ ಸುಕುಮಾರ್ ಮುಖರ್ಜಿ ಹೇಳಿದರು.

ರಾಣಿ ಅವರು 1997ರಲ್ಲಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು. ಆಗ ರಾಣಿ ತನ್ನ ದೇಶದ ಪರ ಕ್ಷಮೆ ಕೇಳಬಹುದು ಎಂದು ಹೆಚ್ಚಿನವರು ಆಶಿಸಿದ್ದರು. ಆದರೆ, ಹಾಗಾಗಲಿಲ್ಲ. ಬ್ರಿಟಿಷ್‌ ಸೇನಾಧಿಕಾರಿ ಆದೇಶದಂತೆ 1919ರಲ್ಲಿ ಹತ್ಯಾಕಾಂಡ ನಡೆದಿತ್ತು.

ಕೊಹಿನೂರ್ ವಜ್ರ ಮರಳಿಸಿ: ರಾಣಿ ಎಲಿಜಬೆತ್ ನಿಧನದ ಹಿಂದೆಯೇ ಸದ್ಯ, ಬ್ರಿಟನ್‌ನ ರಾಜಮನೆತನದಲ್ಲಿ ಇರುವ ಅಮೂಲ್ಯ 105 ಕ್ಯಾರಟ್‌ನ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿಸಬೇಕು ಎಂಬ ಅಭಿಯಾನ ಟ್ವಿಟರ್‌ನಲ್ಲಿ ಆರಂಭವಾಗಿದೆ.

ಈ ವಜ್ರ 14ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಪತ್ತೆಯಾಗಿದ್ದು, ಬ್ರಿಟಿಷರ ಆಡಳಿತಾವಧಿಯಲ್ಲಿ ಅವರ ಸುಪರ್ದಿಗೆ ಹೋಗಿತ್ತು. ಇದು ತಮಗೆ ಸೇರಬೇಕು ಎಂದು ಭಾರತ ಸೇರಿ ನಾಲ್ಕು ದೇಶಗಳು ಪ್ರತಿಪಾದಿಸುತ್ತಿವೆ. ಟ್ವಿಟರ್‌ನಲ್ಲಿ ಈ ಚರ್ಚೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.