ADVERTISEMENT

ಕೊರೊನಾ ಯೋಧರಿಗೆ ತಬ್ಲೀಗಿಗಳಿಂದ ಅವಮಾನ: ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ

ಏಜೆನ್ಸೀಸ್
Published 28 ಏಪ್ರಿಲ್ 2020, 7:21 IST
Last Updated 28 ಏಪ್ರಿಲ್ 2020, 7:21 IST
ಮುಕ್ತಾರ್‌ ಅಬ್ಬಾಸ್‌ ನಖ್ವಿ (ಸಂಗ್ರಹ ಚಿತ್ರ)
ಮುಕ್ತಾರ್‌ ಅಬ್ಬಾಸ್‌ ನಖ್ವಿ (ಸಂಗ್ರಹ ಚಿತ್ರ)   

ನವದೆಹಲಿ: ‘ಅಪರಾಧ ನಡವಳಿಕೆ’ ಮೂಲಕ ಕೊರೊನಾ ಹರಡುವ ಪಾಪ ಮಾಡಿದ್ದ ತಬ್ಲೀಗಿಗಳು ಈಗ ತಾವು ಕೊರೊನಾ ಯೋಧರು ಎಂದು ಹೇಳಿಕೊಳ್ಳುತ್ತಿದ್ದಾರೆ. ಅದ್ಭುತ...’ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ವ್ಯಂಗ್ಯವಾಡಿದ್ದಾರೆ.

‘ತಮ್ಮ ಕೃತ್ಯಕ್ಕಾಗಿ ನಾಚಿಕೆಪಡುವ ಬದಲು ತಬ್ಲೀಗಿಗಳು ಲಕ್ಷಾಂತರ ಕೊರೊನಾ ಯೋಧರನ್ನು ಅವಮಾನಿಸುತ್ತಿದ್ದಾರೆ’ ಎಂದು ನಖ್ವಿ ಟ್ವೀಟ್ ಮಾಡಿದ್ದಾರೆ.

ದೆಹಲಿಯಲ್ಲಿ ಸೋಂಕಿನಿಂದ ಗುಣಮುಖರಾಗಿರುವ ಸುಮಾರು 350 ತಬ್ಲೀಗಿ ಜಮಾತ್ ಸದಸ್ಯರು ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ. ಈವರೆಗೆ 25 ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ ಎನ್ನಲಾಗಿದೆ.

ADVERTISEMENT

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.