ADVERTISEMENT

ಮುಂಬೈ ಭೂಗತ ದೊರೆ ಎಜಾಜ್ ಲಕ್ಡವಾಲಾ ಬಂಧನ

ಏಜೆನ್ಸೀಸ್
Published 9 ಜನವರಿ 2020, 8:59 IST
Last Updated 9 ಜನವರಿ 2020, 8:59 IST
ಮುಂಬಯಿ ಭೂಗತ ದೊರೆ ಎಜಾಜ್ ಲಕ್ಡವಾಲಾ
ಮುಂಬಯಿ ಭೂಗತ ದೊರೆ ಎಜಾಜ್ ಲಕ್ಡವಾಲಾ   

ಮುಂಬೈ: ಎರಡು ದಶಕಗಳಿಂದ ದೇಶದ ಹಲವು ಪಾತಕಗಳಲ್ಲಿ ಭಾಗಿಯಾಗಿದ್ದ ಭೂಗತದೊರೆಎಜಾಜ್ ಲಕ್ಡವಾಲಾನನ್ನು ಬುಧವಾರ ಮುಂಬೈಪೊಲೀಸರು ಬಂಧಿಸಿದ್ದಾರೆ.

ಎಜಾಜ್ ಲಕ್ಡವಾಲಾ ಕಳೆದ 20 ವರ್ಷಗಳಿಂದ ಹಲವು ಭೂಗತ ಪಾತಕಿಗಳ ಜೊತೆ ನಂಟು ಹೊಂದಿದ್ದ. ಪ್ರಕರಣ ಒಂದರ ಸಂಬಂಧ 2015ರಲ್ಲಿ ದೆಹಲಿ ಪೊಲೀಸರು ಈತನನ್ನು ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಈತ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ತಲೆ ಮರೆಸಿಕೊಂಡಿದ್ದಈತನ ವಿರುದ್ಧ ಇಂಟರ್‌‌ಪೋಲ್ ಮೂಲಕರೆಡ್ ಕಾರ್ನರ್ ನೊಟೀಸ್ ಪ್ರಕಟಿಸಲಾಗಿತ್ತು. ಈತ ಛೋಟಾ ಶಕೀಲ್ ಹಾಗೂ ಛೋಟಾ ರಾಜನ್, ದಾವೂದ್ ಇಬ್ರಾಹಿಂ ಅವರ ಜೊತೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.

ಎಜಾಜ್ ಹಾಗೂ ಆತನ ಪುತ್ರಿ ಸೋನಿಯಾ ಸೇರಿ ಬಾಂದ್ರಾದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಮಂಗಳವಾರಈತನ ಪುತ್ರಿ ಸೋನಿಯಾಳನ್ನು ಬಂಧಿಸಿರುವುದಾಗಿ ಮುಂಬಯಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂತೋಷ್ ರಸ್ತೋಗಿ ಹೇಳಿದ್ದಾರೆ.

ADVERTISEMENT

ಎಜಾಜ್ ಲಕ್ಡವಾಲಾವಿರುದ್ಧ ದೇಶದಾದ್ಯಂತಸುಲಿಗೆ, ಕೊಲೆ ಯತ್ನ, ದರೋಡೆ ಸೇರಿದಂತೆ27 ಪ್ರಕರಣಗಳು ದಾಖಲಾಗಿವೆ. ಸೋನಿಯಾಳಿಂದ ಮಾಹಿತಿ ಸಂಗ್ರಹಿಸಿ ಪಟ್ನಾದಲ್ಲಿ ಬಂದಿಳಿದ ಆರೋಪಿಯನ್ನು ಮುಂಬೈ ರೌಡಿ ನಿಗ್ರಹ ದಳ ಪೊಲೀಸರು ವಶಕ್ಕೆ ಪಡೆದರು. ನಂತರ ಬುಧವಾರ ಬೆಳಿಗ್ಗೆ ಮುಂಬೈಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈತನ ಪುತ್ರಿ ಸೋನಿಯಾ ಮದುವೆಯಾದ ನಂತರ ತನ್ನ ಹೆಸರನ್ನು ಸೋನಿಯಾ ಶೇಖ್ ಎಂದು ಬದಲಿಸಿಕೊಂಡಿದ್ದಳು. ಆದರೂ ಪೊಲೀಸರು ಆಕೆಯನ್ನು ಪತ್ತೆಹಚ್ಚಿಬಂಧಿಸಿರುವುದಾಗಿಮುಂಬಯಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.