ADVERTISEMENT

ಮುಂಬೈ ಖಾಸಗಿ ಆಸ್ಪತ್ರೆ ದೇಶದ ಹೊಸ ಹಾಟ್‌ಸ್ಪಾಟ್‌: ವೈದ್ಯರು, ನರ್ಸ್‌ಗಳಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 8:14 IST
Last Updated 6 ಏಪ್ರಿಲ್ 2020, 8:14 IST
   

ಮುಂಬೈ: ಮುಂಬೈನ್‌ ಖಾಸಗಿ ಆಸ್ಪತ್ರೆ ವಾಕಾರ್ಟ್‌ನ ಮೂವರು ವೈದ್ಯರು ಮತ್ತು 26 ನರ್ಸ್‌ಗಳಿಗೆ ಕೊರೊನಾ ವೈರಸ್‌ ಸೋಂಕು ತಗುಲಿದ್ದು, ಸರ್ಕಾರ ಇಡೀ ಆಸ್ಪತ್ರೆಯನ್ನೇ ಕೋವಿಡ್‌ ಹಾಟ್‌ಸ್ಪಾಟ್‌ ಎಂದು ಘೋಷಣೆ ಮಾಡಿದೆ. ಅಲ್ಲದೆ, ಆಸ್ಪತ್ರೆಯನ್ನು ಸೋಂಕಿತ ಪ್ರದೇಶ ಎಂದು ಪರಿಗಣಿಸಿದ್ದು, ಇಡೀ ಆಸ್ಪತ್ರೆಯನ್ನೇ ಮುಚ್ಚಲಾಗಿದೆ.

ಇದರ ಜತೆಗೇ, ಆಸ್ಪತ್ರೆಯಲ್ಲಿ ಈ ಮಟ್ಟಕ್ಕೆ ಸೋಂಕು ವ್ಯಾಪಿಸಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಕೇಂದ್ರ ತನಿಖೆಗೂ ಆದೇಶಿಸಿದೆ.

ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಸೋಂಕು ಇದೆಯೇ ಇಲ್ಲವೇ ಎಂಬುದನ್ನು ಎರಡೆರಡು ಬಾರಿ ಪರೀಕ್ಷೆ ಮಾಡುವ ವರೆಗೆ ಆಸ್ಪತ್ರೆಯನ್ನು ಮುಚ್ಚಲು ನಿರ್ಧರಿಸಲಾಗಿದೆ.

ADVERTISEMENT

ಕೊರೊನಾ ವೈರಸ್‌ ನಿಯಂತ್ರಿಸಲು ಸರ್ಕಾರ ಭಾನುವಾರ ಅತ್ಯಂತ ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ. ಸೋಂಕಿತ ಪ್ರದೇಶಗಳಿಗೆ ಒಂದು ತಿಂಗಳ ಕಾಲ ನಿರ್ಬಂಧ ವಿಧಿಸುವುದೂ ಆ ನಿರ್ಧಾರಗಳಲ್ಲಿ ಒಂದು. ರೋಗ ನಿಯಂತ್ರಣಕ್ಕಾಗಿ ಚೀನಾ ಅನುಸರಿಸಿದ್ದ ಮಾರ್ಗ ಇದಾಗಿತ್ತು. ಅದರಂತೇ ಸದ್ಯ ಈ ಆಸ್ಪತ್ರೆಯನ್ನು ಮುಚ್ಚಲಾಗಿದೆ.

ಕನಿಷ್ಠ 4 ವಾರಗಳ ಕಾಲ ನಿರ್ಧಿಷ್ಟ ಪ್ರದೇಶದಿಂದ ಹೊಸ ಸೋಂಕು ವರದಿಯಾಗದೇ ಇದ್ದರೆ ಮಾತ್ರ ಸರ್ಕಾರ ನಿರ್ಬಂಧಗಳನ್ನು ತೆರವು ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.