ADVERTISEMENT

ಡೊನಾಲ್ಡ್ ಟ್ರಂಪ್ ಭೇಟಿ ವೇಳೆ ಭಾರತ, ಅಮೆರಿಕ 5 ಒಪ್ಪಂದಗಳಿಗೆ ಸಹಿ ನಿರೀಕ್ಷೆ

ಪಿಟಿಐ
Published 21 ಫೆಬ್ರುವರಿ 2020, 3:12 IST
Last Updated 21 ಫೆಬ್ರುವರಿ 2020, 3:12 IST
ಮೋದಿ, ಟ್ರಂಪ್‌ ಸ್ವಾಗತಕ್ಕೆ ಅಹಮದಾಬಾದ್‌ನಲ್ಲಿ ಹಾಕಲಾಗಿರುವ ಬೃಹತ್ ಕಟೌಟ್ –ರಾಯಿಟರ್ಸ್ ಚಿತ್ರ
ಮೋದಿ, ಟ್ರಂಪ್‌ ಸ್ವಾಗತಕ್ಕೆ ಅಹಮದಾಬಾದ್‌ನಲ್ಲಿ ಹಾಕಲಾಗಿರುವ ಬೃಹತ್ ಕಟೌಟ್ –ರಾಯಿಟರ್ಸ್ ಚಿತ್ರ   

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ವೇಳೆ ಆ ರಾಷ್ಟ್ರದ ಜತೆ ಐದು ಒಪ್ಪಂದಗಳಿಗೆ ಸಹಿ ಹಾಕುವ ಬಗ್ಗೆ ಎದುರುನೋಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಬೌದ್ಧಿಕ ಆಸ್ತಿ ಹಕ್ಕು, ವ್ಯಾಪಾರ ಸೌಲಭ್ಯ ಮತ್ತು ರಾಷ್ಟ್ರೀಯ ಭದ್ರತೆ ಕ್ಷೇತ್ರಗಳಲ್ಲಿ ಒಪ್ಪಂದ ಏರ್ಪಡುವ ನಿರೀಕ್ಷೆ ಇದೆ.

ಭಯೋತ್ಪಾದನೆ ನಿಗ್ರಹ ಸಹಕಾರ, ರಕ್ಷಣೆ–ವ್ಯಾಪಾರ ಕ್ಷೇತ್ರದ ಬಾಂಧವ್ಯ ವೃದ್ಧಿ, ಎಚ್‌1ಬಿ ವೀಸಾ ಕುರಿತಾದ ಭಾರತದ ಕಳವಳ ಮೋದಿ–ಟ್ರಂಪ್ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಮುಖವಾಗಿ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

‘ಭಾರತವು ಟ್ರಂಪ್ ಭೇಟಿಯನ್ನು ಕಾತರದಿಂದ ಎದುರುನೋಡುತ್ತಿದೆ. ಈ ಭೇಟಿಯು ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸಲಿದೆ’ ಎಂದು ಅವರು ಹೇಳಿದ್ದಾರೆ.

ಟ್ರಂಪ್ ಮತ್ತು ಅಮೆರಿಕದ ಉನ್ನತಮಟ್ಟದ ನಿಯೋಗ ಇದೇ 24ರಂದು ಅಹಮದಾಬಾದ್‌ಗೆ ಬರಲಿದೆ. ಎರಡು ದಿನಗಳ ಭೇಟಿಯಲ್ಲಿ ಟ್ರಂಪ್ ಮತ್ತು ಅಮೆರಿಕದ ನಿಯೋಗ ಆಗ್ರಾ ಮತ್ತು ದೆಹಲಿಗೂ ಭೇಟಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.