ADVERTISEMENT

ಡ್ರಗ್ ಮಾಫಿಯಾ: ರಿಯಾ ಚಕ್ರವರ್ತಿ ಸಹೋದರ ಶೋವಿಕ್‌ ಚಕ್ರವರ್ತಿ ಬಂಧಿಸಿದ ಎನ್‌ಸಿಬಿ

ಮೃತ್ಯುಂಜಯ ಬೋಸ್
Published 4 ಸೆಪ್ಟೆಂಬರ್ 2020, 16:06 IST
Last Updated 4 ಸೆಪ್ಟೆಂಬರ್ 2020, 16:06 IST
ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋವಿಕ್‌ ಚಕ್ರವರ್ತಿ
ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋವಿಕ್‌ ಚಕ್ರವರ್ತಿ   

ಮುಂಬೈ: ಬಾಲಿವುಡ್ ಡ್ರಗ್ ಮಾಫಿಯಾ ಜಾಲಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ಸಹೋದರ ಶೋವಿಕ್‌ ಚಕ್ರವರ್ತಿ ಅವರನ್ನು ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಬಂಧಿಸಿದೆ.

ನಟ ಸುಶಾಂತ್ ಸಿಂಗ್ ರಜಪೂತ್‌ ಅವರಿಗೆ ಆಪ್ತರೂ ಆಗಿದ್ದ ಶೋವಿಕ್‌ ಅವರನ್ನು ಬಂಧಿಸುವುದಕ್ಕೂ ಮುನ್ನ ಇಡೀ ದಿನ ವಿಚಾರಣೆಗೆ ಒಳಪಡಿಸಲಾಗಿತ್ತು.

ಶೋವಿಕ್ ಹಾಗೂ ಸುಶಾಂತ್‌ ಅವರ ಮನೆ ನಿರ್ವಾಹಕ ಸ್ಯಾಮುಯೆಲ್ ಮಿರಾಂಡ ಅವರನ್ನು ಮುಂಬೈನ ಬಲ್ಲಾರ್ಡ್‌ ಎಸ್ಟೇಟ್‌ನಲ್ಲಿರುವ ಎನ್‌ಸಿಬಿಯ ಪ್ರಾದೇಶಿಕ ಕಚೇರಿಗೆ ಕರೆದೊಯ್ಯಲಾಗಿದೆ.

ADVERTISEMENT

ರಿಯಾ ಮತ್ತು ಅವರ ತಂದೆ ಲೆ.ಕರ್ನಲ್ (ನಿವೃತ್ತ) ಡಾ. ಇಂದ್ರಜಿತ್ ಗುಪ್ತಾ ಅವರನ್ನೂ ಎನ್‌ಸಿಬಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಶೋವಿಕ್ ಅವರನ್ನು ಶನಿವಾರ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.

ಶೋವಿಕ್‌ ಚಕ್ರವರ್ತಿ ಅವರು ಡ್ರಗ್‌ ಡೀಲರ್‌ ಬಾಸಿತ್‌ ಪರಿಹಾರ್‌ ಜೊತೆ ಸಂಪರ್ಕದಲ್ಲಿರುವುದು ಎನ್‌ಸಿಬಿ ವಿಚಾರಣೆ ವೇಳೆ ತಿಳಿದುಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.