ಮುಂಬೈ: ಮಾಜಿ ಸಚಿವ ಶಶಿಕಾಂತ್ ಶಿಂದೆ ಮಹಾರಾಷ್ಟ್ರ ಎನ್‌ಸಿಪಿಯ (ಶರತ್ಚಂದ್ರ ಪವಾರ್ ಬಣ) ಮುಂದಿನ ಅಧ್ಯಕ್ಷರಾಗುವ ಸಾಧ್ಯತೆಯಿದೆ. ರಾಜ್ಯದ ಸ್ಥಳೀಯ ಸಂಸ್ಥೆ ಮತ್ತು ಕಾರ್ಪೊರೇಷನ್ ಚುನಾವಣೆಗೆ ಮುಂಚೆ ಈ ಬದಲಾವಣೆ ನಡೆಯಲಿದೆ. 26ನೇ ಪಕ್ಷ ಸಂಸ್ಥಾಪನೆಯ ದಿನದಂದು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ್ದ ಜಯಂತ್ ಪಾಟೀಲ್ ಅವರ ಸ್ಥಾನವನ್ನು, ರಾಜ್ಯದ ಸತಾರಾ ಜಿಲ್ಲೆಯವರಾಗಿರುವ ಶಿಂದೆ ತುಂಬಲಿದ್ದಾರೆ.
ಪಕ್ಷದ ಕಾರ್ಯಕಾರಿಣಿ ಸಭೆ ಮುಂಬೈಯಲ್ಲಿ ಮಂಗಳವಾರ ನಡೆಯಲಿದ್ದು, ಈ ವೇಳೆ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮತ್ತು ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸುದ್ದಿಗೆ ಪ್ರತಿಕ್ರಿಯಿಸಿದ ಶಿಂದೆ, ‘ಚರ್ಚೆಯಲ್ಲಿ ನನ್ನ ಹೆಸರು ಬಂದಿದ್ದು ನನಗೆ ಗೌರವ. ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳಲಿದ್ದೇನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.