ADVERTISEMENT

ಶ್ರೀಲಂಕಾದಲ್ಲಿ ಉಗ್ರ ಕೃತ್ಯ: ತನಿಖೆಯ ಜಾಡು ಹಿಡಿದು ಕಾಸರಗೋಡು ತಲುಪಿದ ಎನ್ಐಎ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 11:34 IST
Last Updated 28 ಏಪ್ರಿಲ್ 2019, 11:34 IST
ಶ್ರೀಲಂಕಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದು (ಸಂಗ್ರಹ ಚಿತ್ರ)
ಶ್ರೀಲಂಕಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದು (ಸಂಗ್ರಹ ಚಿತ್ರ)   

ಕಾಸರಗೋಡು: ಈಸ್ಟರ್ ದಿನದಂದು ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದನಾ ಕೃತ್ಯದ ರೂವಾರಿ ಸಹ್ರಾನ್ ಹಾಶಿಂ ಕೇರಳಕ್ಕೆ ಬಂದಿದ್ದಾನೆಎಂಬ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಕಾಸರಗೋಡು ಮತ್ತು ಪಾಲಕ್ಕಾಡ್‌ನಲ್ಲಿ ಶೋಧ ನಡೆಸಿದೆ.

ಕಾಸರಗೋಡಿನಲ್ಲಿ ಎರಡು ಮನೆಗಳಲ್ಲಿ ಮತ್ತು ಪಾಲಕ್ಕಾಡ್‌ನ ಒಂದು ಪ್ರದೇಶದಲ್ಲಿ ತನಿಖಾ ಸಂಸ್ಥೆ ಶೋಧ ನಡೆಸಿದೆ.

ಕಾಸರಗೋಡಿನಲ್ಲಿ ಶೋಧ ನಡೆಸಿದ ನಂತರ ಅಲ್ಲಿನ ಇಬ್ಬರು ವ್ಯಕ್ತಿಗಳು ಕೊಚ್ಚಿಯ ಕಚೇರಿಗೆ ಬಂದು ಹಾಜರಾಗುವಂತೆ ಎನ್ಐಎ ಆದೇಶಿಸಿದೆ. ಈ ಇಬ್ಬರು ವ್ಯಕ್ತಿಗಳಿಂದ ಮೊಬೈಲ್ ಫೋನ್ ಮತ್ತು ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.

ADVERTISEMENT

ಭಾಷಣಕಾರನಾಗಿರುವ ಸಹ್ರಾನ್ ಪದೇ ಪದೇ ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡುತ್ತಿರುತ್ತಾನೆ ಎಂದು ಶ್ರೀಲಂಕಾದ ಪ್ರಮುಖ ಇಂಗ್ಲಿಷ್ ಪತ್ರಿಕೆಯಾದ ಡೈಲಿ ಮಿರರ್ ವರದಿ ಮಾಡಿತ್ತು.

ಆಲುವಾ, ಪನಾಯಿಕುಳ ಮತ್ತು ಮಲಪ್ಪುರಂನಲ್ಲಿ ಸಹ್ರಾನ್ ಭಾಷಣ ಮಾಡಿದ್ದಎಂದು ವರದಿಯಲ್ಲಿ ಹೇಳಲಾಗಿದೆ. ಸರಣಿ ಸ್ಫೋಟ ನಡೆಸಿದನ್ಯಾಷನಲ್ ತೌಹೀದ್ ಜಮಾಅತ್ ಸಂಘಟನೆಯ ನೇತಾರನಾಗಿದ್ದಾನೆ ಸಹ್ರಾನ್ ಹಾಶಿಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.