ADVERTISEMENT

ಅಹಮದಾಬಾದ್‌ | ವಿಮಾನ ದುರಂತ ನಡೆದ ಸ್ಥಳಕ್ಕೆ ಎನ್‌ಐಎ ಅಧಿಕಾರಗಳ ಭೇಟಿ

ಪಿಟಿಐ
Published 13 ಜೂನ್ 2025, 13:27 IST
Last Updated 13 ಜೂನ್ 2025, 13:27 IST
<div class="paragraphs"><p>ಗುಜರಾತ್‌ನ ಅಹಮದಾಬಾದ್‌ ಮೇಘಾನಿ ನಗರ್‌ ಪ್ರದೇಶದಲ್ಲಿರುವ ಬಿಜೆ ವೈದ್ಯಕೀಯ ಕಾಲೇಜಿನ ಕ್ಯಾಂಪಸ್‌ನ ವಿದ್ಯಾರ್ಥಿ ನಿಲಯಕ್ಕೆ ಅಪ್ಪಳಿಸಿದ ವಿಮಾನದ ತುಂಡಾಗಿ ಬಿದ್ದಿರುವ ರೆಕ್ಕೆ. ಕಟ್ಟಡಕ್ಕೆ ಆದ ಹಾನಿ...</p></div>

ಗುಜರಾತ್‌ನ ಅಹಮದಾಬಾದ್‌ ಮೇಘಾನಿ ನಗರ್‌ ಪ್ರದೇಶದಲ್ಲಿರುವ ಬಿಜೆ ವೈದ್ಯಕೀಯ ಕಾಲೇಜಿನ ಕ್ಯಾಂಪಸ್‌ನ ವಿದ್ಯಾರ್ಥಿ ನಿಲಯಕ್ಕೆ ಅಪ್ಪಳಿಸಿದ ವಿಮಾನದ ತುಂಡಾಗಿ ಬಿದ್ದಿರುವ ರೆಕ್ಕೆ. ಕಟ್ಟಡಕ್ಕೆ ಆದ ಹಾನಿ...

   

ರಾಯಿಟರ್ಸ್ ಚಿತ್ರ

ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಭೇಟಿ ನೀಡಿದ್ದಾರೆ.

ADVERTISEMENT

ಎನ್‌ಐಎ ಅಧಿಕಾರಿಗಳಿಗೆ ಕೇಂದ್ರದ ಇತರ ತನಿಖಾ ತಂಡಗಳೂ ಜತೆಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ವಿಮಾನ ಅಪಘಾತ ತನಿಖಾ ಬ್ಯೂರೋ ವಿಚಾರಣೆ ಆರಂಭಿಸಿದೆ.

ಸರ್ಧಾರ್ ವಲ್ಲಭಾಬಾಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 242 ಜನರನ್ನು ಹೊತ್ತೊಯ್ದ ಬೋಯಿಂಗ್ 787–8 ಡ್ರೀಮ್‌ಲೈನರ್‌ ವಿಮಾನವು ರನ್‌ವೇಯಿಂದ 7.6 ಕಿ.ಮೀ. ದೂರದ ಮೇಘನಿ ನಗರ್‌ ಎಂಬಲ್ಲಿ ಬಿಜೆ ವೈದ್ಯಕೀಯ ಕಾಲೇಜಿನ ಮೇಲೆ ಬಿದ್ದು, ಸ್ಫೋಟಗೊಂಡಿದೆ. ರಮೇಶ್‌ ವಿಶ್ವಾಸಕುಮಾರ ಎಂಬುವವರನ್ನು ಹೊರತುಪಡಿಸಿ ವಿಮಾನದಲ್ಲಿದ್ದವರೆಲ್ಲರೂ ಮೃತಪಟ್ಟಿದ್ದಾರೆ. ಮತ್ತೊಂದೆಡೆ ವಿಮಾನ ಬಿದ್ದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿಯೂ ಸಾವುನೋವುಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.