ನೀರವ್ ಮೋದಿ
(ಸಂಗ್ರಹ ಚಿತ್ರ)
ನವದೆಹಲಿ/ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ಗೆ ₹13,000 ಕೋಟಿ ವಂಚನೆ ಮಾಡಿದ ಪ್ರಕರಣದ ಆರೋಪಿ ನೀರವ್ ಮೋದಿ ಅವರ ಜಾಮೀನು ಅರ್ಜಿಯನ್ನು ಲಂಡನ್‌ನ ಹೈಕೋರ್ಟ್ ತಿರಸ್ಕರಿಸಿದೆ.
ಈ ಪ್ರಕರಣದಲ್ಲಿ ಬಂಧಿತರಾಗಿರುವ 54 ವರ್ಷ ವಯಸ್ಸಿನ ನೀರವ್ ಮೋದಿ ಅವರು ಕಳೆದ ಆರು ವರ್ಷಗಳಿಂದ ಬ್ರಿಟನ್‌ನ ಕಾರಾಗೃಹದಲ್ಲಿ ಇದ್ದಾರೆ. ಅಲ್ಲದೆ, ಭಾರತಕ್ಕೆ ಗಡೀಪಾರು ಮಾಡದಂತೆ ಹೋರಾಟ ನಡೆಸುತ್ತಿದ್ದಾರೆ.
ಲಂಡನ್ ಬಂದೀಖಾನೆಯಲ್ಲಿರುವ ಅವರ ಆರೋಗ್ಯ ಹದಗೆಡುತ್ತಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ಅವರ ಪರ ವಕೀಲರು ವಾದ ಮಂಡಿಸಿದರು. ಆದರೆ, ನ್ಯಾಯಮೂರ್ತಿ ಮೈಖೇಲ್ ಫೋರ್ದಾಮ್ ಅವರು, ‘ಜಾಮೀನು ನೀಡಿದಲ್ಲಿ ಪ್ರಕರಣದ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ’ ಎಂದರು.
ಗಡೀಪಾರು ವಾರಂಟ್ ಆಧರಿಸಿ 2019ರ ಮಾರ್ಚ್ 19ರಂದು ಮೋದಿ ಅವರನ್ನು ಬಂಧಿಸಲಾಗಿತ್ತು. ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಏಪ್ರಿಲ್ 2021ರಂದು ಗಡೀಪಾರು ಮಾಡಿ ಆದೇಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.