ನವದೆಹಲಿ: ಸರ್ಕಾರದ ಚಿಂತಕರ ಚಾವಡಿ ಎನಿಸಿರುವ ನೀತಿ ಆಯೋಗವು ಆದಾಯ ತೆರಿಗೆ ಕಾಯ್ದೆ 2025ರಲ್ಲಿ ಹಲವು ಸುಧಾರಣೆಗಳನ್ನು ಪ್ರಸ್ತಾಪಿಸಿದೆ.
ಆಡಳಿತಾತ್ಮಕ, ತಾಂತ್ರಿಕ ಮತ್ತು ಕಾರ್ಯವಿಧಾನದ ಲೋಪಗಳು ಒಳಗೊಂಡಂತೆ ತೆರಿಗೆ ಸಂಬಂಧಿತ 12 ರೀತಿಯ ಉಲ್ಲಂಘನೆಗಳನ್ನು ಅಪರಾಧ ವ್ಯಾಪ್ತಿಯಿಂದ ಹೊರಗಿಡುವ ಪ್ರಸ್ತಾಪ ಕೂಡಾ ಇದರಲ್ಲಿ ಸೇರಿದೆ.
ವಂಚನೆ ಅಥವಾ ದುರುದ್ದೇಶದಿಂದ ಕೂಡಿರುವ ನಡವಳಿಕೆಯನ್ನು ಮಾತ್ರ ಕ್ರಿಮಿನಲ್ ಅಪರಾಧ ವ್ಯಾಪ್ತಿಯಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಹೇಳಿದೆ.
‘ಹೊಸ ಕಾಯ್ದೆಯಲ್ಲಿ 35 ರೀತಿಯ ಉಲ್ಲಂಘನೆಗಳನ್ನು ಕ್ರಿಮಿನಲ್ ಅಪರಾಧ ಎಂದು ಗುರುತಿಸಲಾಗಿದೆ. ಅವುಗಳಲ್ಲಿ 12 ಅನ್ನು ಸಂಪೂರ್ಣವಾಗಿ ಅಪರಾಧ ವ್ಯಾಪ್ತಿಯಿಂದ ಹೊರಗಿಡಬೇಕು. ಆ ಪ್ರಕರಣಗಳನ್ನು ಸಿವಿಲ್ ಅಥವಾ ದಂಡ ವಿಧಿಸುವ ಮೂಲಕ ಬಗೆಹರಿಸಬೇಕು’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.