ADVERTISEMENT

ಕೇಜ್ರಿವಾಲ್ ಪ್ರಮಾಣ ವಚನಕ್ಕೆ ಅನ್ಯ ರಾಜ್ಯಗಳ ಸಿಎಂ, ರಾಜಕಾರಣಿಗಳಿಗೆ ಆಹ್ವಾನವಿಲ್ಲ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 6:05 IST
Last Updated 13 ಫೆಬ್ರುವರಿ 2020, 6:05 IST
   

ದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಫೆ.16ರಂದು ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಅರಂವಿದ ಕೇಜ್ರಿವಾಲ್‌ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆಯಾವುದೇ ರಾಜ್ಯದ, ಯಾವುದೇ ಮುಖ್ಯಮಂತ್ರಿಗಳು ಅಥವಾ ರಾಜಕೀಯ ನಾಯಕರನ್ನು ಆಹ್ವಾನಿಸದಿರಲು ಆಮ್‌ ಆದ್ಮಿ ಪಕ್ಷ (ಎಎಪಿ) ನಿರ್ಧರಿಸಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪಕ್ಷದ ಹಿರಿಯ ನಾಯಕ, ದೆಹಲಿ ಎಎಪಿ ಘಟಕದ ಸಂಚಾಲಕ ಗೋಪಾಲ್‌ ರಾಯ್‌, ‘ಕೇಜ್ರಿವಾಲ್‌ ಅವರು ಫೆ.16ರಂದು, ರಾಮಲೀಲಾ ಮೈದಾನದಲ್ಲಿ, ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ‘ದೆಹಲಿ ಕೇಂದ್ರಿತ’ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ,’ ಎಂದು ತಿಳಿಸಿದರು.

‘ಪ್ರಮಾವಣ ವಚನವೂ ದೆಹಲಿ ಕೇಂದ್ರಿತವಾಗಿ ಮಾತ್ರ ನಡೆಯಲಿದೆ. ಇದರಲ್ಲಿ ಯಾವುದೇ ರಾಜ್ಯದ ಮುಖ್ಯಮಂತ್ರಿಗಳಿಗಾಗಲಿ, ರಾಜಕಾರಣಿಗಳಿಗಾಗಲಿ ಆಹ್ವಾನ ಇರಲಾರದು. ಅರಂವಿಂದ ಕೇಜ್ರಿವಾಲ್‌ ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟ ದೆಹಲಿ ಜನರ ಜೊತೆಗೆ ಮಾತ್ರ ಅವರು ಪದಗ್ರಹಣ ಮಾಡಲಿದ್ದಾರೆ,’ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

ಫೆ. 16ರಂದು ಅರಂವಿದ ಕೇಜ್ರಿವಾಲ್‌ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಫೆ. 11ರಂದು ಪ್ರಕಟವಾದ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಆಡಳಿತಾರೂಢ ಎಎಪಿ 70 ಕ್ಷೇತ್ರಗಳ ಪೈಕಿ 62 ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು.

ಚುನಾವಣೆ ಫಲಿತಾಂಶಕ್ಕೂ ಮುನ್ನ ಅರವಿಂದ ಕೇಜ್ರಿವಾಲ್‌ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿರುವುದಾಗಿ ಸುದ್ದಿಯಾಗಿತ್ತು. ಆದರೆ, ಈಗ ಯಾವುದೇ ರಾಜ್ಯದ ಸಿಎಂಗಳಿಗೂ ಆಹ್ವಾನವಿಲ್ಲ ಎಂದು ಎಎಪಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.