ADVERTISEMENT

ಮಹಿಳಾ ಆರೋಗ್ಯ ಕಾರ್ಯಕರ್ತರಿಗೆ ಸಲ್ಯೂಟ್‌: ಸ್ಮೃತಿ ಇರಾನಿ

ಪಿಟಿಐ
Published 8 ಮಾರ್ಚ್ 2021, 6:19 IST
Last Updated 8 ಮಾರ್ಚ್ 2021, 6:19 IST
ಸ್ಮೃತಿ ಇರಾನಿ
ಸ್ಮೃತಿ ಇರಾನಿ   

ನವದೆಹಲಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮಹಿಳಾ ಆರೋಗ್ಯ ಕಾರ್ಯಕರ್ತರಿಗೆ ಸಲ್ಯೂಟ್ ಮಾಡಿದ್ದಾರೆ.

‘ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮಹಿಳೆಯರು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ’ ಎಂದು ಅವರು ಹೇಳಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು,‘ನೋ ಹೀರೋ ವಿಥ್‌ ಔಟ್‌ ಹರ್‌’. ಕೋವಿಡ್‌–19ನ ಬಿಕ್ಕಟಿನ ಸಂದರ್ಭದಲ್ಲಿ ನಾರಿಶಕ್ತಿಯ, ನಿಸ್ವಾರ್ಥ ಮತ್ತು ದೃಢ ನಿಶ್ಚಯದ ಮನೋಭಾವ ಹೊರಹೊಮ್ಮಿ ಬಂದಿದೆ. ಕೊರೊನಾ ವಿರುದ್ಧ ಹೋರಾಡಿದ ಭಾರತದ 60 ಲಕ್ಷಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ನಮ್ಮ ಸಲ್ಯೂಟ್‌’ ಎಂದಿದ್ದಾರೆ. ಇದರೊಂದಿಗೆ ಅವರು ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

ADVERTISEMENT

ಜಗತ್ತಿನೆಲ್ಲೆಡೆ ಮಾರ್ಚ್‌ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.