ಚಿತ್ರ ಕೃಪೆ: oebenhavns uni
ತಿರುವನಂತಪುರಂ: ಪ್ರಗತಿ ಸಾಧಿಸಲು ಬಯಸುವ ಸಮಾಜಕ್ಕೆ ಹೆಚ್ಚಿನ ಲಾಭವನ್ನು ನೀಡುವ ಅತ್ಯಂತ ಭರವಸೆಯ ಹೂಡಿಕೆ ಎಂದರೆ ಶಿಕ್ಷಣ ಎಂದು ನೊಬೆಲ್ ಪ್ರಶಸ್ತಿ ವಿಜೇತ ಮಾರ್ಟೆನ್ ಪಿ ಮೆಲ್ಡಾಲ್ ಹೇಳಿದ್ದಾರೆ.
ಮುನ್ನಾರ್‌ನಲ್ಲಿ ಬಯೋಟೆಕ್ನಾಲಜಿ ರಿಸರ್ಚ್ ಅಂಡ್ ಇನ್ನೋವೇಶನ್ ಕೌನ್ಸಿಲ್ ಆಯೋಜಿಸಿದ್ದ ಆರ್‌ಜಿಸಿಬಿ ಸಂಶೋಧನಾ ಸಮ್ಮೇಳನದಲ್ಲಿ ಮಾರ್ಟೆನ್ ಪಿ ಮೆಲ್ಡಾಲ್ ಅವರು ಶಿಕ್ಷಣದ ಮಹತ್ವ ತಿಳಿಸಿದರು.
ವಿಯೆಟ್ನಾಂ, ಪೋಲೆಂಡ್, ಫಿನ್‍ಲ್ಯಾಂಡ್, ಡೆನ್ಮಾರ್ಕ್‌ನಂತಹ ದೇಶಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತವೆ.
ಶಿಕ್ಷಣದಿಂದ 10–20 ವರ್ಷಗಳಲ್ಲಿ ಯಶಸ್ಸನ್ನು ಸಾಧಿಸುತ್ತಿವೆ ಎಂದು ರಸಾಯನವಿಜ್ಞಾನ ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಮಾರ್ಟೆನ್ ಪಿ ಮೆಲ್ಡಾಲ್ ತಿಳಿಸಿದರು.
ಆರಂಭಿಕ ತರಗತಿಗಳಿಂದಲೇ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಉತ್ಸಾಹ, ಕುತೂಹಲ ಮತ್ತು ಆಸಕ್ತಿಯನ್ನು ಹುಟ್ಟುಹಾಕಬೇಕು ಎಂದು ಹೇಳಿದರು.
ಶಿಕ್ಷಣಕ್ಕೆ ಸಂಬಂಧಿಸಿದಂತೆ ಆಸಕ್ತಿದಾಯಕ ವಿಷಯಗಳಾದ, ಪರಿಸರ ಮಾಲಿನ್ಯ– ರಕ್ಷಣೆ, ಜಾಗತಿಕ ತಾಪಮಾನ ಏರಿಕೆ, ಯುದ್ಧಗಳ ಪರಿಣಾಮಗಳು, ರಾಜಕೀಯ ಪರಿಕಲ್ಪನೆಗಳು, ಶಾಂತಿಯ ಮಹತ್ವದ ಬಗ್ಗೆ ಕಿರು ವಿಡಿಯೊಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.