ADVERTISEMENT

ನೋಯ್ಡಾ: ಮಹಿಳೆಗೆ ಬೆದರಿಸಿ ಬಟ್ಟೆ ಕಳಚಿಸಿ ವಿಡಿಯೊ ಮಾಡಿದ್ದ ಡೆಲಿವರಿ ಬಾಯ್ ಸೆರೆ

ಪಿಟಿಐ
Published 5 ಸೆಪ್ಟೆಂಬರ್ 2025, 10:55 IST
Last Updated 5 ಸೆಪ್ಟೆಂಬರ್ 2025, 10:55 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನೋಯ್ಡಾ: ಮನೆಯೊಂದಕ್ಕೆ ಅಕ್ರಮವಾಗಿ ನುಗ್ಗಿದ ಡೆಲಿವರಿ ಬಾಯ್‌ವೊಬ್ಬ ಮಹಿಳೆಯನ್ನು ಬೆದರಿಸಿ, ಬಟ್ಟೆ ಬಿಚ್ಚಿಸಿ ವಿಡಿಯೊ ಮಾಡಿಕೊಂಡು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಾಗಿ ಬ್ಲಾಕ್‌ಮೇಲ್‌ ಮಾಡಿರುವ ಪ್ರಕರಣ ನೋಯ್ಡಾದಲ್ಲಿ ವರದಿಯಾಗಿದೆ.

ಈ ಸಂಬಂಧ ಸುರಾಜ್‌ಪುರ ಪೊಲೀಸ್‌ ಠಾಣೆಯಲ್ಲಿ ಸೆಪ್ಟೆಂಬರ್‌ 2ರಂದು ಪ್ರಕರಣ ದಾಖಲಾಗಿದೆ.

ADVERTISEMENT

ಆರೋಪಿಯನ್ನು ಗುಲಿಸ್ತಾನ್‌ಪುರದ ಗೌರವ್‌ (22) ಎಂದು ಗುರುತಿಸಲಾಗಿದೆ.

ಬಲವಂತವಾಗಿ ಮನೆಯೊಳಗೆ ನುಗ್ಗಿದ್ದ ಆರೋಪಿ, ಮಲಗಿದ್ದ ಬಾಲಕನ ಕುತ್ತಿಗೆಗೆ ಚಾಕು ಹಿಡಿದಿದ್ದಾನೆ. ನಂತರ ಆತನ ತಾಯಿಗೆ ಬೆದರಿಕೆ ಹಾಕಿ, ಬಟ್ಟೆ ಕಳಚುವಂತೆ ಒತ್ತಾಯಿಸಿದ್ದಾನೆ. ಆ ವೇಳೆ ತನ್ನ ಮೊಬೈಲ್‌ನಿಂದ ವಿಡಿಯೊ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಗೆ ಪದೇ ಪದೇ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಆರೋಪಿ, ಸಂತ್ರಸ್ತೆಯ ಮಗುವನ್ನು ಅಪಹರಿಸುವುದಾಗಿ ಹಾಗೂ ಅಹಮದಾಬಾದ್‌ನಲ್ಲಿ ಕೆಲಸ ಮಾಡುತ್ತಿರುವ ಆಕೆಯ ಪತಿಗೆ ವಿಡಿಯೊಗಳನ್ನು ಕಳುಹಿಸುವುದಾಗಿ ಹೆದರಿಸಿದ್ದ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಂತಿಮವಾಗಿ, ವಿಡಿಯೊಗಳನ್ನು ಮಹಿಳೆಯ ಪತಿಗೆ ಕಳುಹಿಸಿರುವ ಆರೋಪಿ, ಸಾಮಾಜಿಕ ಮಾಧ್ಯಮಗಳಿಗೂ ಹರಿಬಿಟ್ಟಿದ್ದಾನೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ಮೊಬೈಲ್‌ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.