ADVERTISEMENT

ಕನ್ವರ್ ಯಾತ್ರಿಕರಿಗಾಗಿ 'ನಾನ್ ವೆಜ್' ಹೋಟೆಲ್‍ಗಳು ವೆಜ್ ಹೋಟೆಲ್ ಆದವು!

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2018, 1:56 IST
Last Updated 3 ಆಗಸ್ಟ್ 2018, 1:56 IST
ಕನ್ವರ್ ಯಾತ್ರಿಕರು (ಸಂಗ್ರಹ ಚಿತ್ರ)
ಕನ್ವರ್ ಯಾತ್ರಿಕರು (ಸಂಗ್ರಹ ಚಿತ್ರ)   

ಮೀರತ್: ಕನ್ವರ್ ತೀರ್ಥಯಾತ್ರಿಕರುಸಾಗುವ ದಾರಿಯಾದ ಘಂಟಾಘರ್‌ನಲ್ಲಿ ಮಾಂಸಾಹಾರ ಮಾರುತ್ತಿದ್ದ ಸ್ಟಾಲ್‍ಗಳು ಸಸ್ಯಾಹಾರ ಸ್ಟಾಲ್‍ಗಳಾಗಿ ಬದಲಾಗಿವೆ.ಚಿಕನ್, ಮಟನ್ ಬಿರಿಯಾನಿ ಮಾರುತ್ತಿದ್ದ ಹೋಟೆಲ್‍ಗಳಲ್ಲೀಗ ಪನೀರ್ ಬಿರಿಯಾನಿ ಮಾರಾಟವಾಗುತ್ತಿದೆ.

ಶಿವನ ದರ್ಶನಕ್ಕಾಗಿ ಕನ್ವರ್ ತೀರ್ಥಯಾತ್ರೆ ಕೈಗೊಳ್ಳಲಾಗುತ್ತಿದ್ದು, ಇವರನ್ನುಕನ್ವರಿಯಾ ಎಂದು ಕರೆಯುತ್ತಾರೆ.ಈ ದಾರಿಯಾಗಿ ಸಾಗುವಾಗ ನಾನ್ ವೆಜ್ ಹೋಟೆಲ್ ಮುಂದೆ ಕನ್ವರಿಯಾಗಳಿಗೆ ಸ್ವಾಗತ ಕೋರುವ ಬ್ಯಾನರ್‌ಗಳಿವೆ.ಅದರಲ್ಲಿ ಶ್ರಾವಣ ಮಾಸದಲ್ಲಿ ಕನ್ವರ್ ಯಾತ್ರೆ ಕೈಗೊಂಡಿರುವ ಭಕ್ತರಿಗಾಗಿ ನಮ್ಮ ಹೋಟೆಲ್‍ನಲ್ಲಿ ಹಲೀಮ್ ಬಿರಿಯಾನಿ ಲಭ್ಯವಿದೆ ಎಂದು ಬರೆಯಲಾಗಿದೆ.

ಹಿಂದೂ ಮುಸ್ಲಿಂ ಸಮುದಾಯದ ನಡುವೆ ಬಿರುಕು ಮೂಡಿಸಲು ರಾಜಕೀಯ ನೇತಾರರು ಪ್ರಯತ್ನಿಸಿದ್ದರು.ಆದರೆ ಸಾಮರಸ್ಯದಿಂದ ನಾವು ಬದುಕಿದರೆ ಸಮಾಜಕ್ಕೆ ಒಳ್ಳೆಯದು.ಅದು ನಮ್ಮ ಜವಾಬ್ದಾರಿಯೂ ಹೌದು. ನಮ್ಮ ಅಂಗಡಿಗೆ ತರುವ ವಸ್ತುಗಳು ಮತ್ತು ಮನೆಗೆ ತರುವ ಪಡಿತರ ಎಲ್ಲವೂ ಹಿಂದೂ ಸಹೋದರರ ಅಂಗಡಿಯಿಂದಲೇ ತರುತ್ತೇವೆ.ಇಲ್ಲಿ ಧರ್ಮಗಳ ನಡುವೆ ಭೇದಭಾವ ಇದೆ ಎಂದವರು ಯಾರು? ಅಂತಾರೆ 49ರ ಹರೆಯದ ಅಬ್ದುಲ್ ರೆಹಮಾನ್.ಇವರು ಘಂಟಾಘರ್‌ನಲ್ಲಿ 1968 ರಿಂದ ನಾನ್ ವೆಜ್ ಬಿರಿಯಾನಿ ಮಾರುತ್ತಿದ್ದಾರೆ.

ADVERTISEMENT

ಕಳೆದ ಮೂರು ದಿನಗಳಲ್ಲಿ ಮಾರಾಟದಲ್ಲಿ ಶೇ.20 ರಷ್ಟು ನಷ್ಟ ಕಂಡು ಬಂದಿದೆ.ಆದರೆ ಇದು ಯಾವುದೂ ಲೆಕ್ಕಕ್ಕಿಲ್ಲ.ಯಾವುದೇ ಲಾಭ- ನಷ್ಟದ ಆಕಾಂಕ್ಷೆ ಇಲ್ಲದೆ ನಾವು ವ್ಯಾಪಾರಮಾಡುತ್ತಿದ್ದೇವೆ. ಹಿಂದೂಗಳಿಗೆ ಶ್ರಾವಣ ಮಾಸ ಅದೆಷ್ಟು ಪವಿತ್ರ ಎಂದು ನಮಗೆ ಗೊತ್ತಿದೆ ಅಂತಾರೆ ನಾನ್ ವೆಜ್ ಹೋಟೆಲ್ ನಡೆಸುತ್ತಿರುವ ರೈಸುದ್ದೀನ್.

ಕನ್ವರ್ ಯಾತ್ರೆಯ ಸಮಯದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ರೆಸ್ಟೊರೆಂಟ್ ಮಾಲೀಕರೆಲ್ಲ ಸಭೆ ಸೇರಿದ್ದರು. ಶ್ರಾವಣ ಮಾಸದಲ್ಲಿ ನಾನ್ ವೆಜ್ ಮಾರುವುದಿಲ್ಲ ಎಂಬುದು ಅವರ ಒಕ್ಕೊರಲ ತೀರ್ಮಾನವಾಗಿತ್ತು ಎಂದುಕೊಟ್ವಲಿ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿ ಯಶ್ವೀರ್ ಸಿಂಗ್ ಹೇಳಿದ್ದಾರೆ.

ಹೋಟೆಲ್ ಮಾಲೀಕರ ನಿರ್ಧಾರವನ್ನು ಸ್ವಾಗತಿಸಿದ ಉತ್ತರಪ್ರದೇಶದ ಬಿಜೆಪಿ ಮಾಜಿ ಮುಖ್ಯಸ್ಥ ಲಕ್ಷ್ಮೀಕಾಂತ್ ಬಾಜ್ಪೈ, ಇದು ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸುತ್ತದೆ ಎಂದಿದ್ದಾರೆ.

ಹಾಪುರ್ ಮತ್ತು ದೆಹಲಿ ರಸ್ತೆಯಲ್ಲಿ ನಾನ್ ವೆಜ್ ಮಾರುತ್ತಿದ್ದ ಎಲ್ಲ ಅಂಗಡಿಗಳು ಮುಚ್ಚಿವೆ.ಶ್ರಾವಣ ಮಾಸ ಆರಂಭವಾಗುವ ಮುನ್ನವೇ ಸಭೆ ಕರೆದು ಮಾಂಸ ಮಾರಾಟ ಮಾಡುವುದು ಬೇಡ ಎಂದು ಹೇಳಿದ್ದೆವು. ಅದಕ್ಕೆ ಅವರೆಲ್ಲರೂ ಸಂತೋಷದಿಂದಲೇ ಒಪ್ಪಿದ್ದರು.ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ನಾವು ವರದಿ ನೀಡಲಿದ್ದೇವೆ ಎಂದು ಮೀರತ್ ಎಸ್‍ಎಸ್‍ಪಿ ರಾಜೇಶ್ ಕುಮಾರ್ ಪಾಂಡೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.